ಧಾರವಾಡ: ನಗರದ ರೆವಿನ್ಯೂ ಕಾಲೊನಿಯ ಧರ್ಮಶಾಸ್ತ್ರ ಸೇವಾ ಸಮಿತಿ ವತಿಯಿಂದ ಅಯ್ಯಪ್ಪ ಸ್ವಾಮಿ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಈಚೆಗೆ ಜರುಗಿತು.
ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ಅಂಬಾರಿ ಮೆರವಣಿಗೆ ನಡೆಯಿತು.
ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು, ಸಿದ್ಧಾರೂಢ ಮಠದ ಮಾದವಾನಂದ ಸ್ವಾಮೀಜಿ, ಶಿವಪುತ್ರ ಸಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ರೆವೆನ್ಯೂ ಕಾಲೊನಿಯಿಂದ ದಾಸನಕೊಪ್ಪ ವೃತ್ತ, ಸಪ್ತಾಪುರ ಬಾವಿ ಮಾರ್ಗವಾಗಿ ಶಿರಡಿ ಸಾಯಿ ಬಾಬಾ ಮಂದಿರ ತಲುಪಿ ಮೆರವಣಿಗೆ ಸಂಪನ್ನಗೊಂಡಿತು. ಮೆರವಣಿಗೆಗೆ ಕಲಾ ತಂಡಗಳು ಮೆರುಗು ನೀಡಿದವು.
ರಮೇಶ ಪಾತ್ರೋಟ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಎಸಿಪಿ ಪ್ರಶಾಂತ ಸಿದ್ದನಗೌಡರ, ಸಾಯಿ ಮಂದಿರ ಅಧ್ಯಕ್ಷ ಮಹೇಶ ಶೆಟ್ಟಿ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಮಂಜು ಬಟ್ಟೆಣ್ಣವರ, ಮುಖಂಡರಾದ ರಾಹುಸಾಹೇಬ ಪಾಟೀಲ, ಶಿವಾಜಿ ಪಡಕೆ, ಉದಯ ಶೆಟ್ಟಿ, ಗಿರೀಶ ಮಂಗೋಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.