ADVERTISEMENT

‘ದೈಹಿಕ ಸದೃಢತೆಗೆ ಬ್ಯಾಡ್ಮಿಂಟನ್ ಸಹಕಾರಿ’

ಎರಡನೇ ಆವೃತ್ತಿಯ ಕೆಜಿಪಿಎಲ್‌ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 15:35 IST
Last Updated 5 ಜುಲೈ 2023, 15:35 IST
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಮೈದಾನದಲ್ಲಿ ಆಯೋಜಿಸಿರುವ ಕರ್ನಾಟಕ ಜಿಮ್ಖಾನಾ ಬ್ಯಾಡ್ಮಿಂಟನ್‌ ಪ್ರೀಮಿಯರ್ ಲೀಗ್ (ಕೆಜಿಪಿಎಲ್‌) ಎರಡನೇ ಆವೃತ್ತಿಗೆ ಬುಧವಾರ ಅಸೋಸಿಯೇಷನ್‌ ಅಧ್ಯಕ್ಷ ಎಚ್‌.ಎನ್‌.ನಂದಕುಮಾರ ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಮೈದಾನದಲ್ಲಿ ಆಯೋಜಿಸಿರುವ ಕರ್ನಾಟಕ ಜಿಮ್ಖಾನಾ ಬ್ಯಾಡ್ಮಿಂಟನ್‌ ಪ್ರೀಮಿಯರ್ ಲೀಗ್ (ಕೆಜಿಪಿಎಲ್‌) ಎರಡನೇ ಆವೃತ್ತಿಗೆ ಬುಧವಾರ ಅಸೋಸಿಯೇಷನ್‌ ಅಧ್ಯಕ್ಷ ಎಚ್‌.ಎನ್‌.ನಂದಕುಮಾರ ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು   

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ವಿಶ್ವ ಬ್ಯಾಡ್ಮಿಂಟನ್‍ ದಿನದ ಅಂಗವಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್  ಮೈದಾನದಲ್ಲಿ ಆಯೋಜಿಸಿರುವ ಕರ್ನಾಟಕ ಜಿಮ್ಖಾನಾ ಬ್ಯಾಡ್ಮಿಂಟನ್‌ ಪ್ರೀಮಿಯರ್ ಲೀಗ್ (ಕೆಜಿಪಿಎಲ್‌) ಎರಡನೇ ಆವೃತ್ತಿಗೆ ಬುಧವಾರ ಚಾಲನೆ ನೀಡಲಾಯಿತು. ‌

ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಅಧ್ಯಕ್ಷ ಎಚ್‌.ಎನ್‌.ನಂದಕುಮಾರ, ‘ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಟೂರ್ನಿ ಆಯೋಜಿಸಿರುವುದು ಶ್ಲಾಘನೀಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಬ್ಯಾಡ್ಮಿಂಟನ್‌ ಸಹಕಾರಿಯಾಗಿದೆ’ ಎಂದರು.

ADVERTISEMENT

ಅಸೋಸಿಯೇಷನ್‌ ಕ್ರೀಡಾ ವಿಭಾಗದ ಸಂಚಾಲಕ ಉದಯ ಬಾಡ್ಕರ ಮಾತನಾಡಿ, ‘ಮೂರು ಬ್ಯಾಡ್ಮಿಂಟನ್‌ ಅಂಕಣಗಳು ಅಸೋಸಿಯೇಷನ್‌ನಲ್ಲಿದ್ದು, ಪ್ರತಿ ಶನಿವಾರ, ಭಾನುವಾರ ದಿನಕ್ಕೆ ಏಳು ಪಂದ್ಯಗಳು ನಡೆಯಲಿವೆ. ಆಗಸ್ಟ್‌ 19ರಂದು ಫೈನಲ್‌ ಪಂದ್ಯ ನಡೆಯಲಿದೆ. ಇಬ್ಬರು ರ‍್ಯಾಂಕಿಂಗ್ ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ’ ಎಂದು ಹೇಳಿದರು.

‘ನಾಲ್ಕು ತಂಡಗಳು ಭಾಗವಹಿಸಿದ್ದು, ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಅಂತರರಾಷ್ಟ್ರೀಯ ನಿಯಮಾವಳಿಗಳ ಅನ್ವಯ ಪಂದ್ಯಗಳು ನಡೆಯಲಿವೆ. ಮಾನ್ಯತೆ ಪಡೆದ ರೆಫರಿಗಳು ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ’  ಎಂದರು. 

ಅಸೋಸಿಯೇಷನ್‌ ಉಪಾಧ್ಯಕ್ಷ ಗೋವಿಂದ ಜೋಶಿ, ಅಸೋಸಿಯೇಷನ್‌ ಕಾರ್ಯದರ್ಶಿ ವೀರಣ್ಣ ಸವಡಿ ಮಾತನಾಡಿದರು.

‘ಅಮಲು ಮುಕ್ತ ಸಮಾಜ’ ಎಂಬ ಘೋಷವಾಕ್ಯದಡಿ ಟೂರ್ನಿ ಆಯೋಜಿಸಲಾಗಿದೆ. ಡಾ.ಅಪೂರ್ವ ಮತ್ತು ಡಾ.ಶ್ರುತಿ ಮಾಲೀಕತ್ವದ ವೀವ್‍ವಿಕ್ಟರ್ಸ್, ಸೋಮಶೇಖರ ಉಮರಾಣಿ ಮಾಲೀಕತ್ವದ ಉಮರಾಣಿ ಟೈಗರ್ಸ್, ಶ್ರೀನಿವಾಸ ಕಾಟವೆ ಮಾಲೀಕತ್ವದ ಶೀನು ಸ್ಲಾಮಸಲ್ ಮತ್ತು ಬಸವರಾಜ ಉಳ್ಳಾಗಡ್ಡಿಮಠ ಮಾಲೀಕತ್ವದ 8 ಪಿಎಂ ಕಿಂಗ್ಸ್ ತಂಡಗಳು ಭಾಗವಹಿಸಲಿದೆ. 4 ತಂಡಗಳಲ್ಲಿ 60 ಆಟಗಾರರು ಭಾಗವಹಿಸಲಿದ್ದಾರೆ. ಕೃಷ್ಣ ಉಚ್ಛಿಲ ಮತ್ತು ಡಿ.ಕೆ. ಶ್ರೀನಾಥ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಡಾ.ಶ್ರುತಿ, ಡಾ.ಅಪೂರ್ವಾ, ಜಾನ್‌ ರಾಬರ್ಟ್‌, ಬಸವರಾಜ ಉಳ್ಳಾಗಡ್ಡಿಮಠ, ಕೃಷ್ಣ ಉಚ್ಛಿಲ, ವಿನೋದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.