ADVERTISEMENT

ಧಾರವಾಡ: ಬ್ಯಾಂಕ್‌ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:39 IST
Last Updated 28 ಜನವರಿ 2026, 7:39 IST
ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಯೂನಿಯನ್ ಬ್ಯಾಂಕ್  ಆವರಣದಲ್ಲಿ ಬ್ಯಾಂಕ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಯೂನಿಯನ್ ಬ್ಯಾಂಕ್  ಆವರಣದಲ್ಲಿ ಬ್ಯಾಂಕ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಆರ್‌ಬಿಐ, ಎಲ್‌ಐಸಿ, ಜಿಐಸಿ ನೌಕರರಿಗೆ ಇರುವ ಮಾದರಿಯಲ್ಲಿ ಬ್ಯಾಂಕ್ ನೌಕರರಿಗೂ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸದ ದಿನಗಳನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಫೋರಂ ಆಫ್‌ ಬ್ಯಾಂಕ್ ಯೂನಿಯನ್ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ನಗರದ ಸ್ಟೇಷನ್ ರಸ್ತೆಯ ಯೂನಿಯನ್ ಬ್ಯಾಂಕ್ ಆವರಣದಲ್ಲಿ ಸೇರಿದ ಬ್ಯಾಂಕ್ ನೌಕರರು ಫಲಕಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿದರು.

‘ಶನಿವಾರ ಮತ್ತು ಭಾನುವಾರ ರಜೆ ನೀಡಿದರೆ ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಬ್ಯಾಂಕಿಂಗ್ ಸೇವೆ ಪಡೆಯಲು ಪ್ರಸ್ತುತ ದಿನಗಳಲ್ಲಿ ಗ್ರಾಹಕರಿಗೆ ಹಲವು ಮಾರ್ಗಗಳಿವೆ’ ಎಂದು ಪ್ರತಿಭಟನಕಾರರು ಹೇಳಿದರು.

ADVERTISEMENT

ಸ್ಟಿಫನ್ ಜಯಚಂದ್ರ, ರುದ್ರಗೌಡ ಪಾಟೀಲ, ಗಿರೀಶ ಬಾಳಗಿ, ಸಂತೋಷ ಕುಮಾರ ಹುಲ್ಲೂರ, ಸಂತೋಷ ನಾಝರೆ, ವಾಗೀಶ ಮಳಿಯೇ, ಸಂತೋಷ ಮೀರಜಕರ, ರಾಮಮೋಹನ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.