ADVERTISEMENT

ಬಸವಣ್ಣ ದೇವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:19 IST
Last Updated 3 ಮೇ 2022, 4:19 IST
ತಾಲ್ಲೂಕಿನ ಜೋಡಳ್ಳಿ ಗ್ರಾಮದ ಬಸವಣ್ಣ ದೇವರ ಜಾತ್ರಾ ಮಹೋತ್ಸವಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಡೊಳ್ಳು ಬಾರಿಸಿ ಚಾಲನೆ ನೀಡಿದರು
ತಾಲ್ಲೂಕಿನ ಜೋಡಳ್ಳಿ ಗ್ರಾಮದ ಬಸವಣ್ಣ ದೇವರ ಜಾತ್ರಾ ಮಹೋತ್ಸವಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಡೊಳ್ಳು ಬಾರಿಸಿ ಚಾಲನೆ ನೀಡಿದರು   

ಕಲಘಟಗಿ: ತಾಲ್ಲೂಕಿನ ಜೋಡಳ್ಳಿ ಗ್ರಾಮದ ಬಸವಣ್ಣ ದೇವರ ಜಾತ್ರಾ ಮಹೋತ್ಸವಕ್ಕೆ ಕಾಂಗ್ರೆಸ್ ಮುಖಂಡ ಸಂತೋಷ್‌ ಲಾಡ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಗ್ರಾಮೀಣ ಭಾಗದ ಜಾತ್ರೆಗಳು ತಾಲ್ಲೂಕಿನ ಘನತೆ,ಗೌರವ, ಸಂಸ್ಕೃತಿ ಎತ್ತಿ ತೋರಿಸುವಲ್ಲಿ ಸಾಕ್ಷಿಯಾಗಿವೆ ಎಂದು ಹೇಳಿದರು. ಗ್ರಾಮದಲ್ಲಿ ಮಹಿಳೆಯರಿಂದ ಕುಂಭಮೇಳ ಹಮ್ಮಿಕೊಳ್ಳಲಾಗಿತ್ತು. ಲಾಡ್ ಅವರು ಜಾತ್ರಾಮಹೋತ್ಸವದ ಅನ್ನ ದಾಸೋಹಕ್ಕೆ ₹ 1 ಲಕ್ಷ ಹಣ ದೇಣಿಗೆ ನೀಡಿದರು.

ಮಂಜುನಾಥ ಮುರಳ್ಳಿ, ಸೋಮಶೇಖರ ಬೆನ್ನೂರ, ಗಿರೀಶ ಸೂರ್ಯವಂಶಿ, ನರೇಶ ಮಲೆನಾಡ, ಗುರು ಬೆಂಗೇರಿ, ಶಿವಯ್ಯ ಹಿರೇಮಠ, ಚನ್ನಬಸಯ್ಯ ಹೆಬ್ಬಳಿಮಠ, ರುದ್ರಗೌಡ ಪಾಟೀಲ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.