ADVERTISEMENT

ಉಕ್ಕಿ ಹರಿದ ಬೆಣ್ಣಿಹಳ್ಳ: ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:47 IST
Last Updated 8 ಆಗಸ್ಟ್ 2022, 4:47 IST
ನವಲಗುಂದ ತಾಲ್ಲೂಕಿನ ಯಮನೂರ ಮತ್ತು ಪಡೆಸೂರ ಗ್ರಾಮದ ಮಳಾಳ ಹಳ್ಳ ತುಂಬಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ
ನವಲಗುಂದ ತಾಲ್ಲೂಕಿನ ಯಮನೂರ ಮತ್ತು ಪಡೆಸೂರ ಗ್ರಾಮದ ಮಳಾಳ ಹಳ್ಳ ತುಂಬಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ   

ನವಲಗುಂದ: ತಾಲ್ಲೂಕಿನ ಪಡೆಸೂರ ಮತ್ತು ಯಮನೂರ ಗ್ರಾಮಗಳ ಮಧ್ಯೆ ಮಳಾಳ ಹಳ್ಳದದಲ್ಲಿ ನೀರು ತುಂಬಿ ಹರಿಯುತ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ.

ಗುರವಾರ ರಾತ್ರಿ ಕುಂದಗೋಳ ಭಾಗದಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಬೆಣ್ಣಿ ಹಳ್ಳ ಉಕ್ಕಿ ಹರಿಯುತ್ತಿದ್ದು ಬೆಣ್ಣಿ ಹಳ್ಳದ ನೀರು ಮಳಾಳ ಹಳ್ಳಕ್ಕೆ ಬಂದು ಸೇರುತ್ತದೆ. ಮೊರಬ ಮತ್ತು ತಿರ್ಲಾಪೂರ ಗ್ರಾಮದ ಭಾಗದಲ್ಲಿ ಸ್ಪಲ ಮಳೆಯಾದರೂ ಈ ಹಳ್ಳ ತುಂಬಿ ಹರಿದು ಪ್ರತಿಬಾರಿ ರಸ್ತೆ ಸಂಪರ್ಕ ಕಡಿತಗೊಳ್ಳತ್ತದೆ.

ಕಳೆದ ವರ್ಷ ಈ ಸೇತುವೆ ಕಾಮಗಾರಿಗೆ ಸುಮಾರು ₹ 50 ಲಕ್ಷ ವೆಚ್ಚ ಮಾಡಲಾಗಿತ್ತು. ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಪಡೆಸೂರ ಗ್ರಾಮದ ರೈತ ರಮೇಶ ನವಲಗುಂದ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.