ADVERTISEMENT

ಧಾರವಾಡ: ಭರತನಾಟ್ಯ ರಂಗಪ್ರವೇಶ 24ರಂದು 

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:08 IST
Last Updated 21 ಮೇ 2025, 14:08 IST
ಶ್ರಾವಣಿ ಜೋಶಿ
ಶ್ರಾವಣಿ ಜೋಶಿ   

ಧಾರವಾಡ: ನಗರದ ಉಪಾಸನಾ ನೃತ್ಯ ವಿದ್ಯಾಧಾಮ ವತಿಯಿಂದ ಮೇ 24ರಂದು ನಗರದಲ್ಲಿ ಶ್ರಾವಣಿ ಜೋಶಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿದುಷಿ ವಾಣಿಶ್ರೀ ಭಟ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೃಜನಾ ರಂಗಮಂದಿರದಲ್ಲಿ ಸಂಜೆ 5.30ಕ್ಕೆ ನೃತ್ಯ ಕಾರ್ಯಕ್ರಮ ಆರಂಭವಾಗಲಿದೆ. ಪುಣೆಯ ನೀತಿ ಮೆನನ್‌ ಅವರು ಮೃದಂಗ, ಪಂಚಮ ಉಪಾಧ್ಯಾಯ ವಯೋಲಿನ್, ಗೋಪಿಕೃಷ್ಣ ನಂಬೂದರಿ, ಬೆಂಗಳೂರಿನ ಮಧುಸೂದನ್ ಕೊಳಲು ನುಡಿಸುವರು ಎಂದರು.

ಮಂಗಳೂರಿನ ವಿದ್ಯಾಶ್ರೀ ರಾಧಾಕೃಷ್ಣ, ರಂಗಕರ್ಮಿ ಪ್ರಕಾಶ ಗರುಡ ಪಾಲ್ಗೊಳ್ಳುವರು. ಮೈಸೂರಿನ ವಿದುಷಿ ಅನಿತಾ ಸಿ.ಎನ್. ಅಧ್ಯಕ್ಷತೆ ವಹಿಸುವರು ಎಂದರು.

ADVERTISEMENT

ಜಯಂತ ಜೋಶಿ, ಸತೀಶ ಪೂಜಾರಿ, ನರಸಿಂಹ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.