ADVERTISEMENT

ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ: ಬಿಜೆಪಿ ಮಹಿಳಾ ಮೋರ್ಚಾ ಉಸ್ತುವಾರಿ ರೇಖಾ ಹೆಗಡೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 15:21 IST
Last Updated 20 ಡಿಸೆಂಬರ್ 2021, 15:21 IST
ಹುಬ್ಬಳ್ಳಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಸ್ತುವಾರಿ ರೇಖಾ ಹೆಗಡೆ ಮಾತನಾಡಿದರು
ಹುಬ್ಬಳ್ಳಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಸ್ತುವಾರಿ ರೇಖಾ ಹೆಗಡೆ ಮಾತನಾಡಿದರು   

ಹುಬ್ಬಳ್ಳಿ: ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನವಿದ್ದು, ಪಕ್ಷದಲ್ಲಿ ಶೇ 50ರಷ್ಟು ಸ್ಥಾನ ನೀಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಸ್ತುವಾರಿ ರೇಖಾ ಹೆಗಡೆ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಹು–ಧಾ ಮಹಾನಗರ ಜಿಲ್ಲಾ ಮಹಿಳಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಪ್ರಯೋಜನ ಪ್ರತಿಯೊಬ್ಬ ಮಹಿಳೆಗೂ ಸಿಗುವಂತಾಗಬೇಕಾದರೆ ಕಾರ್ಯಕರ್ತರು ಅದರ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮಾ ಲದವಾ, ಪಕ್ಷ ಸಂಘಟನೆಗೆ ಎಲ್ಲ ಕಾರ್ಯಕರ್ತರು ಸಮಯ ನೀಡಬೇಕು. ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಮಹಿಳಾ ಕಾರ್ಯದರ್ಶಿ ಮೇನಕಾ ಹುರಳಿ, ಪಾಲಿಕೆ ಸದಸ್ಯೆಯರಾದ ರಾಧಾಬಾಯಿ ಸಫಾರೆ, ರೂಪಾ ಶೆಟ್ಟಿ, ಉಮಾ ಮುಕುಂದ, ನಾಯಕಿಯರಾದ ಸುಜಾತಾ ಕಳ್ಳಿಮನಿ, ಅನುರಾಧಾ ಚಿಲ್ಲಾಳ, ಪೂರ್ಣಿಮಾ ಶಿಂಧೆ, ವಿಜಯಲಕ್ಷ್ಮಿ ತಿಮ್ಮೊಲಿ, ಪ್ರತಿಭಾ ಪವಾರ, ಶೋಭಾ ನಾಕೋಡ, ಅನುಸೂಯಾ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.