ADVERTISEMENT

ಬಿಜೆಪಿಯಿಂದ ಮತಕ್ಕಾಗಿ ವಿವೇಕಾನಂದರ ಜಯಂತಿ ದುರುಪಯೋಗ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 10:13 IST
Last Updated 12 ಜನವರಿ 2023, 10:13 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಕಲಬುರಗಿ: ಮತ ಗಳಿಕೆಗಾಗಿ ಬಿಜೆಪಿಯು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ವಿವೇಕಾನಂದರ ಜಯಂತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.‌‌ ಕುಮಾರಸ್ವಾಮಿ ‌ಟೀಕಿಸಿದರು.

ಪಂಚರತ್ನ ಯಾತ್ರೆಯ‌ ಅಂಗವಾಗಿ ಜಿಲ್ಲೆಯಲ್ಲಿ ಸುತ್ತಾಡುತ್ತಿರುವ ಅವರು ಗುರುವಾರ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನೆಟೆರೋಗ ಪೀಡಿತ ತೊಗರಿ ಬೆಳೆ ವೀಕ್ಷಿಸಿ ಮಾತನಾಡಿದರು.

'ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಯ ಯುವ ಜನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಬಿಜೆಪಿಯವರಗೆ ಯಾವುದೇ ವಿಷಯಗಳು ಇಲ್ಲ. ಪ್ರಧಾನಿ ದೊಡ್ಡ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬರುತ್ತಿಲ್ಲ. ವಿವೇಕಾನಂದರ ಜನ್ಮದಿನವನ್ನು ದುರುಪಯೋಗ ಪಡಿಸಿಕೊಂಡು ಮತ ಕೇಳಲು ಹೊರಟಿದ್ದಾರೆ ಎಂದರು.

ADVERTISEMENT

'ಕಲಬುರಗಿಗೆ ಹಕ್ಕು ಪತ್ರ ಕೊಡಲಿಕ್ಕೆ ಪ್ರಧಾನ ಮಂತ್ರಿ ಬರಬೇಕಾ? ರಾಜ್ಯದ ಮುಖ್ಯಮಂತ್ರಿ, ಸಚಿವರು ಕೊಡಲು ಆಗುತ್ತಿರಲಿಲ್ಲವೇ? ಆ ಕಾರ್ಯಕ್ರಮಕ್ಕೆ ಐದು ಲಕ್ಷ ಜನರನ್ನು ಸೇರಿಸುತ್ತಾರಂತೆ' ಎಂದು ವ್ಯಂಗ್ಯವಾಡಿದರು.

ಕಲ್ಯಾಣ ಕರ್ನಾಟಕಕ್ಕೆ ಬರುತ್ತಿರುವ ಅನುದಾನ ಎಲ್ಲಿ ಹೋಗುತ್ತಿದೆ? ಶೌಚಾಲಯ ಬೇಕು ಎಂದು ಎಲ್ಲ ಕಡೆ ಮಹಿಳೆಯರು ಹೇಳುತ್ತಿದ್ದಾರೆ. ರಸ್ತೆಗಳು ಹಾಳುಬಿದ್ದಿವೆ, ಎಲ್ಲಿ ಆಗಿದೆ ಪ್ರಗತಿ ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ₹ 1500 ಕೋಟಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರ್ಕಾರ ನೀಡುತ್ತಿದೆ. ಒಬ್ಬ ಶಾಸಕರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಷ್ಟೊಂದು ಹಣ ಎಲ್ಲಿ ಹೋಗುತ್ತಿದೆ' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.