ADVERTISEMENT

ಬಿಐಎ: ಕಂಪ್ಯೂಟರ್‌ ಡೇಟಾ ಸೈನ್ಸ್‌ ಕೋರ್ಸ್‌ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:29 IST
Last Updated 13 ಜೂನ್ 2025, 15:29 IST
ಶ್ರೀನಿವಾಸ ಪ್ರಕಾಶ ಕ್ಯಾರಕಟ್ಟಿ
ಶ್ರೀನಿವಾಸ ಪ್ರಕಾಶ ಕ್ಯಾರಕಟ್ಟಿ   

ಹುಬ್ಬಳ್ಳಿ: ಕಂಪ್ಯೂಟರ್‌ ಡೇಟಾ ಸೈನ್ಸ್‌ ಕೋರ್ಸ್‌ಗಳ ತರಬೇತಿ ನೀಡುವಲ್ಲಿ ಹೆಸರಾಗಿರುವ ಬೋಸ್ಟನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅನಾಲಿಟಿಕ್ಸ್‌ (ಬಿಐಎ) ಸಂಸ್ಥೆಯು ಇಲ್ಲಿನ ವಿದ್ಯಾನಗರದ ಶಿರೂರ್‌ ಪಾರ್ಕ್‌ ರಸ್ತೆಯ ಶಿಟ್‌ ಬ್ಯಾಲೆಟ್‌ ಕಟ್ಟಡದಲ್ಲಿ ನೂತನ ಶಾಖೆ ಆರಂಭಿಸಿದೆ. ಡಿಪ್ಲೊಮಾ, ಮಾಸ್ಟರ್‌ ಡಿಪ್ಲೊಮಾ ಸೇರಿದಂತೆ ಬಿಐಎಯ ಡ್ಯೂಯಲ್‌ ಪ್ರಮಾಣ‍ಪತ್ರ ಕೋರ್ಸ್‌ಗಳಿಗೆ ಸಂಬಂಧಿಸಿದ ನೂತನ ತಂತ್ರಜ್ಞಾನದ ಕಂಪ್ಯೂಟರ್‌ ಶಿಕ್ಷಣ ತರಬೇತಿ ನೀಡುತ್ತಿದೆ. 

ಕೇಂದ್ರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಪ್ರಕಾಶ ಕ್ಯಾರಕಟ್ಟಿ ಅವರು, ‘ನಮ್ಮ ಸಂಸ್ಥೆಯಲ್ಲಿ ಡೇಟಾ ಸೈನ್ಸ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಜನರೇಟಿವ್‌ ಎಐ, ಸೈಬರ್‌ ಸೆಕ್ಯೂರಿಟಿ, ಎಥಿಕಲ್‌ ಹ್ಯಾಕಿಂಗ್‌, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೆವೊಪ್ಸ್ ಸೇರಿದಂತೆ ನೂತನ ತಂತ್ರಜ್ಞಾನದ ಕಂಪ್ಯೂಟರ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ತರಬೇತಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ’ ಎಂದರು.

‘ಅಂತರರಾಷ್ಟ್ರೀಯ ಶೈಕ್ಷಣಿಕ ಮಾನದಂಡದ ಅನ್ವಯ ಕಂಪ್ಯೂಟರ್‌ ತರಬೇತಿ ಶಿಕ್ಷಣ ನೀಡಲಾಗುವುದು. ಪ್ರಮಾಣಪತ್ರ, ಡಿಪ್ಲೊಮಾ ಮತ್ತು ಮಾಸ್ಟರ್‌ ಡಿಪ್ಲೊಮಾ ಕೋರ್ಸ್‌ ಹಾಗೂ ಬಿಐಎಯ ಡ್ಯೂಯಲ್ ಪ್ರಮಾಣಪತ್ರಗಳಿಗೆ ಸಂಬಂಧಿಸಿ 4 ತಿಂಗಳು, 6 ತಿಂಗಳು ಹಾಗೂ 10 ತಿಂಗಳ ತರಬೇತಿ ಕೋರ್ಸ್‌ಗಳಾಗಿರುತ್ತವೆ’ ಎಂದು ತಿಳಿಸಿದರು.

ADVERTISEMENT

‘4 ತಿಂಗಳ ಪ್ರಮಾಣಪತ್ರದ ಕೋರ್ಸ್‌ ₹85 ಸಾವಿರ. 6 ತಿಂಗಳ ಡಿಪ್ಲೊಮಾ ಕೋರ್ಸ್‌ ₹1.25ಲಕ್ಷ. 10ತಿಂಗಳ ಮಾಸ್ಟರ್‌ ಡಿಪ್ಲೊಮಾ ಕೋರ್ಸ್‌ ₹1.45ಲಕ್ಷ ತರಬೇತಿ ಶುಲ್ಕವಿದೆ. ಕಂತು ರೂಪದಲ್ಲಿಯೂ ಶುಲ್ಕ ತುಂಬಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು’ ಎಂದರು. 

‘ನೂತನ ತಂತ್ರಜ್ಞಾನ ಕೌಶಲ ಹೊಂದಿರುವ ಶಿಕ್ಷಕರಿಂದಲೇ ತರಬೇತಿ ನೀಡಲಾಗುತ್ತದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 1ರಿಂದ ತರಗತಿ ಆರಂಭವಾಗಲಿದೆ‘ ಎಂದರು.  ಹೆಚ್ಚಿನ ಮಾಹಿತಿಗೆ ಮೊಬೈಲ್‌: 91363336463 ಸಂಪರ್ಕಿಸಬಹುದು. ಅಶ್ವಿನಿ ನಿಟಾಲಿ, ನಿಶಾತ್ ಮುದೋಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.