ADVERTISEMENT

ಬ್ರಹ್ಮಾಬಾಬಾ ಸ್ಮೃತಿದಿನ: ಧ್ಯಾನ, ಪ್ರವಚನ ನಾಳೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:45 IST
Last Updated 17 ಜನವರಿ 2026, 5:45 IST
ಪಿತಾಶ್ರೀ ಬ್ರಹ್ಮಾಬಾಬಾ
ಪಿತಾಶ್ರೀ ಬ್ರಹ್ಮಾಬಾಬಾ   

ಹುಬ್ಬಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಸ್ಥಾಪಕ ಪಿತಾಶ್ರೀ ಬ್ರಹ್ಮಾಬಾಬಾ ಅವರ 58ನೇ ಸ್ಮೃತಿ ದಿನ ಅಂಗವಾಗಿ ಇಲ್ಲಿನ ಜೆ.ಸಿ. ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜ.18ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರವರೆಗೆ ವಿಶೇಷ ಧ್ಯಾನ ಹಾಗೂ ಪ್ರವಚನ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಲಯ ಈಶ್ವರೀಯ ವಿಶ್ವವಿದ್ಯಾಲಯದ ನಿರ್ದೇಶಕ ಬಸವರಾಜ ರಾಜಋಷಿಗಳು ಹಾಗೂ ಬ್ರಹ್ಮಕುಮಾರಿ ನಿರ್ಮಲಕ್ಕ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT