ADVERTISEMENT

ಗಾಂಜಾ ಸಾಗಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:23 IST
Last Updated 5 ಸೆಪ್ಟೆಂಬರ್ 2020, 14:23 IST
ಆರ್ಥಿಕ ಮತ್ತು ಮಾದಕ ವಸ್ತು ಅಪರಾಧ ಠಾಣೆ ಪೊಲೀಸರು ಬಂಧಿಸಿರುವ ಆರೋಪಿಗಳು (ನೆಲದಲ್ಲಿ ಕುಳಿತಿರುವವರು)
ಆರ್ಥಿಕ ಮತ್ತು ಮಾದಕ ವಸ್ತು ಅಪರಾಧ ಠಾಣೆ ಪೊಲೀಸರು ಬಂಧಿಸಿರುವ ಆರೋಪಿಗಳು (ನೆಲದಲ್ಲಿ ಕುಳಿತಿರುವವರು)   

ಹುಬ್ಬಳ್ಳಿ: ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆ ಪೊಲೀಸರು, ₹25 ಸಾವಿರ ಮೌಲ್ಯದ ಅರ್ಧ ಕೆ.ಜಿ ಗಾಂಜಾ, ರಾಯಲ್ ಎನ್‌ಫಿಲ್ಡ್ ಬೈಕ್ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಗುರುನಾಥನಗರದ ನೂರ್ ಅಹಮದ್ (24) ಹಾಗೂ ಚಂದ್ರನಾಥನಗರದ ಅಕ್ಷಯ ವೇರ್ಣೆಕರ ಬಂಧಿತರು. ಆರೋಪಿಗಳು ತೋಳನಕೆರೆ ಸಮೀಪದ ಸೇತುವೆ ಬಳಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ಕುರಿತು ಸಿಕ್ಕ ಮಾಹಿತಿ ಮೇರೆಗೆ, ಕಾರ್ಯಾಚರಣೆ ನಡೆಸಿ ಮಾಲು ಸಮೇತ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಎನ್.ಸಿ. ಕಾಡದೇವರಮಠ, ಸಿಬ್ಬಂದಿ ಬಿ.ಕೆ. ಹೂಗಾರ, ಸಿ.ಎಂ. ಕಂಬಾಳಿಮಠ, ರವಿ ಕೋಳಿ, ಎಂ.ಡಿ. ಬಡಿಗೇರ, ವೈ.ಎಫ್. ದಾಸಣ್ಣನವರ, ಪಿ.ಬಿ. ಹಿರಗಣ್ಣನವರ, ಮೋಹನ ಈಳಿಗೇರ ಹಾಗೂ ರಾಕೇಶ ಗೋರ್ಕಲ ಭಾಗವಹಿಸಿದ್ದರು.

ADVERTISEMENT

ಅವಳಿನಗರದಲ್ಲಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಮೂರು ದಿನದಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ. ಇದುವರೆಗೆ ಏಳೂವರೆ ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.