ಹುಬ್ಬಳ್ಳಿ: ‘ನನಗೆ ಮತ್ತು ನನ್ನ ನಾಲ್ಕು ವರ್ಷದ ಮಗನಿಗೆ ಪತ್ನಿ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಜಗದೀಶ ಕೆ.ಹರಿಜನ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷಗಳ ಹಿಂದೆ ವಿನಯಾ ಎಡ್ವರ್ಡ್ ಅವರನ್ನು ಮದುವೆಯಾಗಿದ್ದು, ನಮಗೆ ರಾಯನ್ ರಾಜ್ ಎಂಬ ಮಗ ಇದ್ದಾನೆ. ಎಡ್ವರ್ಡ್ ಅವರಿಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಇತ್ತು. ವಿನಯಾ ಅವರು ಅವರ ತಾಯಿ, ಸಹೋದರಿಯ ಜತೆ ಇದ್ದು, ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ ನನಗೆ ಮತಾಂತರವಾಗುವಂತೆ ಒತ್ತಡ ಹಾಕಿದ್ದಾರೆ’ ಎಂದು ಹೇಳಿದರು.
‘ಜಾತಿ ನಿಂದನೆ, ಜೀವ ಬೆದರಿಕೆ ಮತ್ತು ಮತಾಂತರಕ್ಕೆ ಒತ್ತಡ ಹಾಕಿದ ಬಗ್ಗೆ ಅಶೋಕ ನಗರ ಠಾಣೆಗೆ ಜ.11ರಂದು ದೂರು ನೀಡಿದ್ದು, ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ವಿಶ್ವನಾಥ ಬೂದೂರು, ಲಕ್ಷ್ಮಮ್ಮ ಕೃಷ್ಣಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.