ADVERTISEMENT

ಬೆಳಗಾವಿ–ಬೆಂಗಳೂರು ರೈಲು ಸಮಯದಲ್ಲಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 15:50 IST
Last Updated 15 ಡಿಸೆಂಬರ್ 2020, 15:50 IST

ಹುಬ್ಬಳ್ಳಿ: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಿಂದ ಬೆಳಗಾವಿಗೆ ನಿತ್ಯ ಸಂಚರಿಸುವ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯದಲ್ಲಿ ಎರಡೂ ಮಾರ್ಗದಿಂದ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಡುವ ರೈಲು ಯಶವಂತಪುರ (ರಾ. 9.10), ತುಮಕೂರು (ರಾ.10.02), ಅರಸೀಕೆರೆ (ರಾ. 11.18), ದಾವಣಗೆರೆ (ರಾ. 1.18), ಹುಬ್ಬಳ್ಳಿ (ಬೆ. 3.55), ಧಾರವಾಡ (ಬೆ. 4.28) ನಿಲ್ದಾಣಗಳಲ್ಲಿ ನಿಲುಗಡೆಯಾಗಿ ಬೆಳಿಗ್ಗೆ 7.15ಕ್ಕೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಹೊರಟು ಧಾರವಾಡ (ರಾ. 11), ಹುಬ್ಬಳ್ಳಿ (ರಾ. 11.30), ದಾವಣಗೆರೆ (ರಾ. 1.48), ಅರಸೀಕೆರೆ (ಬೆಳಗಿನ ಜಾವ 3.45), ತುಮಕೂರು (ಬೆ. 5.33), ಯಶವಂತಪುರ (ಬೆ. 6.53) ಮತ್ತು ಕೆಎಸ್‌ಆರ್‌ ನಿಲ್ದಾಣ (ಬೆ. 7.25) ಮುಟ್ಟಲಿದೆ.

ಮೈಸೂರು–ಸೊಲ್ಲಾಪುರ ಗೋಲ್‌ಗುಂಬಜ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದ ಎರಡೂ ಮಾರ್ಗದಲ್ಲಿ ಡಿ. 19ರಿಂದ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 3.45ಕ್ಕೆ ಮೈಸೂರಿನಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 12.10ಕ್ಕೆ ಸೊಲ್ಲಾಪುರ ತಲುಪಲಿದೆ.

ADVERTISEMENT

ಹಾವೇರಿ (ರಾ.12.58), ಹುಬ್ಬಳ್ಳಿ (ಬೆ. 3.25), ಗದಗ (ಬೆ. 4.50), ಹೊಳೆಆಲೂರು (ಬೆ. 5.49), ಬಾದಾಮಿ (ಬೆ. 6.10), ಗುಳೇದಗುಡ್ಡ ರೋಡ್‌ (ಬೆ.6.22), ಬಾಗಲಕೋಟೆ (ಬೆ.6.40), ಆಲಮಟ್ಟಿ (ಬೆ. 7.17), ಬಸವನಬಾಗೇವಾಡಿ ರೋಡ್‌ (ಬೆ. 7.41), ವಿಜಯಪುರ (ಬೆ. 8.50) ಮತ್ತು ಇಂಡಿ ರೋಡ್ (ಬೆ. 9.44) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಇದೇ ರೈಲು ಸೊಲ್ಲಾಪುರದಿಂದ ಮಧ್ಯಾಹ್ನ 2.10ಕ್ಕೆ ಹೊರಟು ಮರುದಿನ ಬೆಳಿಗ್ಗೆ 11 ಗಂಟೆಗೆ ಮೈಸೂರು ತಲುಪಲಿದೆ.

ಭಾಗಶಃ ರದ್ದು: ಹುಬ್ಬಳ್ಳಿ–ಧಾರವಾಡ ನಡುವಿನ ರೈಲು ಮಾರ್ಗದಲ್ಲಿ ತಾಂತ್ರಿಕ ಕೆಲಸವಿರುವ ಕಾರಣ ಡಿ. 16 ಹಾಗೂ 17ರಂದು ಮುಂಬೈನ ಬಾರ್ಲಾ ಕುಂದ್ರಾ ನಿಲ್ದಾಣದಿಂದ ಹೊರಡುವ ಲೋಕಮಾನ್ಯ ತಿಲಕ್ ಟರ್ಮಿನಸ್‌–ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದಲ್ಲಿ ಭಾಗಶಃ ರದ್ದು ಮಾಡಲಾಗಿದೆ. ಈ ರೈಲು ಧಾರವಾಡ ತನಕ ಮಾತ್ರ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.