
ಧಾರವಾಡ: ಎಲ್ಲರೂ ಸಹೋದರತ್ವ, ಪ್ರೀತಿ, ಅನ್ಯೋನ್ಯತೆ, ಭ್ರ್ರಾತೃತ್ವದಿಂದ ಬಾಳಬೇಕು. ಇದು ಕ್ರಿಸ್‍ಮಸ್ ಆಶಯ’ ಎಂದು ಬಿಷಪ್ ಮಾರ್ಟಿನ್ ಸಿ.ಬೋರ್ಗಾಯಿ ತಿಳಿಸಿದ್ದಾರೆ.
ಯೇಸು ಕ್ರಿಸ್ತ ಅವರ ಜನ್ಮ ದಿನೋತ್ಸವ ಕ್ರಿಸ್‌ಮಸ್. ಇದು ಕರುಣೆ, ಶಾಂತಿ, ಪ್ರೀತಿ, ತ್ಯಾಗಗಳ ಸಂದೇಶವನ್ನು ಸಾರುವ ಹಬ್ಬ. ಇದು ಕ್ರಿಶ್ಚಿಯನ್ ಸಮುದಾಯದವರಿಗೆ ಸೀಮಿತವಾದ ಹಬ್ಬವಲ್ಲ. ಎಲ್ಲ ಸಮುದಾಯದವರು ಭಾಗವಹಿಸುವ ಹಬ್ಬ ಎಂದು ತಿಳಿಸಿದ್ಧಾರೆ.
ಬಾಂಧವ್ಯಗಳನ್ನು ಕಾಪಾಡಿಕೊಳ್ಳಬೇಕು. ಭಿನ್ನಾಭಿಪ್ರಾಯಗಳನ್ನು ಬಿಡಬೇಕು. ಮತ ಪಂಥಗಳೆಂಬ ಗೋಡೆಯನ್ನು ತೆಗೆದುಹಾಕಿ ಉತ್ತಮ ಸಂಬಂಧ ಕಟ್ಟಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
2025ನೇ ವರ್ಷ ಸತತ ಮಳೆ, ನೆರೆ ಹಾವಳಿ, ಚಂಡಮಾರುತ, ಭೂಕಂಪ ಸಂಭವಿಸಿ ಕಂಗೆಡುವಂತೆ ಮಾಡಿದವು. ಕ್ರಿಸ್‌ಮಸ್ ಎಲ್ಲರಿಗೂ ನೆಮ್ಮದಿ ನೀಡಲಿ, ಮುಂಬರುವ ವರ್ಷ ಹರ್ಷ ತರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.