ADVERTISEMENT

ಬಿಜೆಪಿಯಿಂದ ‘ಸ್ವಚ್ಛ ಸಂಡೇ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 12:50 IST
Last Updated 29 ನವೆಂಬರ್ 2020, 12:50 IST
ಹುಬ್ಬಳ್ಳಿಯ ಉಣಕಲ್‌ ಕೆರೆಯಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿ ಮತ್ತು ಅದರ ಸುತ್ತಮುತ್ತಲಿನ ಕಸ ಸ್ವಚ್ಛ ಮಾಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು
ಹುಬ್ಬಳ್ಳಿಯ ಉಣಕಲ್‌ ಕೆರೆಯಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿ ಮತ್ತು ಅದರ ಸುತ್ತಮುತ್ತಲಿನ ಕಸ ಸ್ವಚ್ಛ ಮಾಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು   

ಹುಬ್ಬಳ್ಳಿ: ಬಿಜೆಪಿ ಮಹಾನಗರ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತರು ನಗರದ ಉಣಕಲ್‌ ಕೆರೆಯಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿ ಮತ್ತು ಅದರ ಸುತ್ತಮುತ್ತಲಿನ ಕಸವನ್ನು ಸ್ವಚ್ಛ ಮಾಡುವ ಮೂಲಕ ‘ಸ್ವಚ್ಛ ಸಂಡೇ' ಆಚರಿಸಿದರು.

ಯುವ ಮೋರ್ಚಾ ವತಿಯಿಂದ ಪ್ರತಿ ಭಾನುವಾರ ಈ ಕಾರ್ಯಕ್ರಮ ಜರುಗಲಿದೆ. ಇಲ್ಲಿ ಆರಂಭಬಾದ ಯೋಜನೆ ರಾಜ್ಯದಾದ್ಯಂತ ವಿಸ್ತರಿಸಲು ರಾಜ್ಯ ಯುವ ಮೋರ್ಚಾ ತೀರ್ಮಾನಿಸಿದೆ.

ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಜಿ. ಸಂದೀಪಕುಮಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ‘ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲೆ ಹಮ್ಮಿಕೊಂಡಿರುವ 'ಸ್ವಚ್ಛ ಸಂಡೇ' ಕಾರ್ಯಕ್ರಮ ರಾಜ್ಯಕ್ಕೆ ಪ್ರೇರಣೆಯಾಗಿದೆ’ ಎಂದರು.

ADVERTISEMENT

ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಮೋರ್ಚಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಿರಣ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಡಾ ಮಲ್ಲಿಕಾರ್ಜುನ ಬಾಳಿಕಾಯಿ, ಪ್ರಮುಖರಾದ ಸಂಗಮ ಹಂಜಿ, ಶಿವಯ್ಯ ಹಿರೇಮಠ, ಅವಿನಾಶ್ ಹರಿವಾಣ, ನವೀನ್ ಹತ್ತಿಬೆಳಗಲ್, ನವೀನ ಡಂಬಳ, ಗಂಗಾಧರ ಸಂಗಮ ಶೆಟ್ಟರ್, ನಾಗರಾಜ್ ಕಟಾವಿ, ಕಲ್ಮೇಶ ಮುಳುಗುಂದ, ರೇಖಾ ಹೊಸೂರ, ಪವನ ಹಳಿಯಾಳ, ಕಿಶನ ಬಿಲಾನಾ, ಅಖಿಲ್ ತಂಬಳ, ಮಂಜುನಾಥ ಸಿದ್ದಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.