ADVERTISEMENT

‘ಪ್ರವರ್ಗ 1ರ ಸಮುದಾಯದ ಬೇಡಿಕೆ ಈಡೇರಿಸಿ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:13 IST
Last Updated 6 ಡಿಸೆಂಬರ್ 2021, 16:13 IST

ಹುಬ್ಬಳ್ಳಿ: ‘ಹಿಂದುಳಿದ ಪ್ರವರ್ಗ-1ರಡಿ ಬರುವ ವಿವಿಧ ಸಮುದಾಯದವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು’ ಎಂದು ಗಂಗಾಮತ ಸಮಾಜದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಅಶೋಕ ದೆಸ್ತಾ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೈಕ್ಷಣಿಕ ಸೌಲಭ್ಯ, ವಿದ್ಯಾರ್ಥಿ ನಿಲಯ ಸ್ಥಾಪನೆ, ಉತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸಮುದಾಯ ಭವನ ನಿರ್ಮಿಸಬೇಕು ಎಂದು ಮನವಿ ನೀಡುತ್ತ ಬರಲಾಗಿದೆ. ಆದರೆ, 2013ರಿಂದ ಆಡಳಿತಕ್ಕೆ ಬಂದ ಯಾವುದೇ ಸರ್ಕಾರ ಬೇಡಿಕೆಗಳನ್ನು ಈಡೇರಿಸಿಲ್ಲ. ಮುಂಬರುವ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ಕುರಿತು ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.

‘ಪ್ರವರ್ಗ-1ರಲ್ಲಿ ಉಪ್ಪಾರ, ಗಂಗಾಮತ, ಗೊಲ್ಲ, ಕಾಡುಗೊಲ್ಲ, ಕಾಡುಗೊಲ್ಲ, ಹರಿಕಾಂತ ಸೇರಿದಂತೆ 95 ಜಾತಿಗಳು, 309 ಉಪಜಾತಿಗಳು ಬರುತ್ತವೆ’ ಎಂದು ತಿಳಿಸಿದರು.

ADVERTISEMENT

ಈಶ್ವರ ಶಿರಕೋಳ, ಮಾರುತಿ ಮೆಳವಂಕಿ, ಹನುಮಂತಪ್ಪ ಹಿತ್ತಲಮನಿ, ಸುಧೀರ ಉಪ್ಪಾರ, ಮರಿಸ್ವಾಮಿ ಉಪ್ಪಾರ, ಶಂಕ್ರಪ್ಪ ಬಮ್ಮಿಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.