ADVERTISEMENT

ಮತದಾರರ ತೀರ್ಪಿಗೆ ಕಾಂಗ್ರೆಸ್ ದ್ರೋಹ: ಜೋಶಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:02 IST
Last Updated 1 ಡಿಸೆಂಬರ್ 2019, 10:02 IST
   

ಹುಬ್ಬಳ್ಳಿ: ‘ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಎನ್‌ಸಿಪಿ ಜತೆಗೂಡಿ ಸರ್ಕಾರ ರಚಿಸಿರುವ ಕಾಂಗ್ರೆಸ್, ಮತದಾರರ ತೀರ್ಪಿಗೆ ದ್ರೋಹ ಮಾಡಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ–ಎನ್‌ಸಿಪಿ ನೇತೃತ್ವದ ಸರ್ಕಾರ ರಚನೆಯ ತೀರ್ಮಾನ ಸರಿಯಾಗಿಯೇ ಇತ್ತು. ಆದರೆ, ಶಿವಸೇನಾವು ಕಾಂಗ್ರೆಸ್ ಆಪರೇಷನ್‌ಗೆ ಮುಂಚೆಯೇ ಒಳಗಾಗಿತ್ತು. ಆ ಪಕ್ಷಕ್ಕೆ ಓಟು ಬಂದಿದ್ದೇ ಬಿಜೆಪಿಯಿಂದ. ಅಂತಹ ಪಕ್ಷದ ಜತೆ, ಕಾಂಗ್ರೆಸ್ ಯಾವ ನೈತಿಕತೆಯ ಆಧಾರದ ಮೇಲೆ ಸರ್ಕಾರ ರಚಿಸಿದೆ?’ ಎಂದು ಪ್ರಶ್ನಿಸಿದರು.

‘ಸರ್ಕಾರ ಬೀಳಿಸುವ ರಾಜಕಾರಣ ಶರದ್ ಪವಾರ್ ಅವರಿಗೆ ಹೊಸದೇನಲ್ಲ. ಹಿಂದೆ ವಸಂತದಾದಾ ಪಾಟೀಲ್ ಅವರಿಗೂ ಮೋಸ ಮಾಡಿ, ಒಂದಿಷ್ಟು ಶಾಸಕರನ್ನು ತಮ್ಮೊಂದಿಗೆ ಕರೆದೊಯ್ದು ಮುಖ್ಯಮಂತ್ರಿಯಾಗಿದ್ದರು. ಅವರ ನಡೆಗೆ ಹಿಂದಿಯ ‘ಜೈಸಾ ಮಾಮಾ, ವೈಸಾ ಬತೀಜಾ’ ಎಂಬ ಮಾತು ಸೂಕ್ತವಾಗಿ ಅನ್ವಯವಾಗುತ್ತದೆ’ ಎಂದರು.

ADVERTISEMENT

‘ಗೋವಾ ಸರ್ಕಾರ ಸುಭದ್ರವಾಗಿದ್ದು, ಯಾವುದೇ ತೊಂದರೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.