ADVERTISEMENT

ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 15:37 IST
Last Updated 5 ಜುಲೈ 2023, 15:37 IST
ಹುಬ್ಬಳ್ಳಿಯ ಉಣಕಲ್‌ನ ತಾಜನಗರದ ಮುಖ್ಯರಸ್ತೆಯಲ್ಲಿ ತೆರೆಯಲಾಗಿರುವ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಅವರನ್ನು ಬುಧವಾರ  ಸನ್ಮಾನಿಸಲಾಯಿತು
ಹುಬ್ಬಳ್ಳಿಯ ಉಣಕಲ್‌ನ ತಾಜನಗರದ ಮುಖ್ಯರಸ್ತೆಯಲ್ಲಿ ತೆರೆಯಲಾಗಿರುವ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಅವರನ್ನು ಬುಧವಾರ  ಸನ್ಮಾನಿಸಲಾಯಿತು   

ಹುಬ್ಬಳ್ಳಿ: ಉಣಕಲ್‌ನ ತಾಜನಗರದ ಮುಖ್ಯರಸ್ತೆಯಲ್ಲಿ ಬುಧವಾರ ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸಿದರು.

ನಂತರ ಮಾತನಾಡಿದ ಶೆಟ್ಟರ್‌ ಅವರು, ‘ಸಾರ್ವಜನಿಕರ ಅಹವಾಲು ಆಲಿಸಲು ಮತ್ತು ಸರ್ಕಾರದ ಸೌಲಭ್ಯಕ್ಕಾಗಿ ಅಲೆದಾಟ ತಪ್ಪಿಸಲು ಈ ಕಾರ್ಯಾಲಯ ತೆರೆಯಲಾಗಿದೆ. ಈ ಭಾಗದ ಜನರು ತಮ್ಮ ಅಹವಾಲುಗಳನ್ನು ಕಾರ್ಯಾಲಯಕ್ಕೆ ಬಂದು ಸಲ್ಲಿಸಬಹುದು’ ಎಂದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಕೆಪಿಸಿಸಿ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ, ಕಾಂಗ್ರೆಸ್ ಉಣಕಲ್ ಬ್ಲಾಕ್ ಅಧ್ಯಕ್ಷ ಶರೀಫ್ ಗರಗದ,  ಮುಖಂಡರಾದ ಕಲ್ಲಪ್ಪ ವಾಲಿಕಾರ, ರಫೀಕ್ ದೊಡಮನಿ, ಬಸಣ್ಣ ಹೆಬ್ಬಳ್ಳಿ, ವೆಂಕಣ್ಣ ಕರಡ್ಡಿ, ಕಲ್ಲಪ್ಪ ಎಲಿವಾಳ,  ಹೆಬ್ಬಳ್ಳಿ ಉಳವಪ್ಪ ಪರಣ್ಣವರ, ರಾಮನಾಥ ಶೆಣೈ, ಕೇದಾರಿ ಕಬಾಡಗಿ,  ಅನ್ನಪೂರ್ಣ ಪಾಟೀಲ, ಸಂಜೀವ ಧುಮಕನಾಳ, ದಾವಲ್ ನದಾಫ್‌, ಹಜರತ್ ನದಾಫ್‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.