
ಇಂದಿರಾ ಗಾಂಧಿ
ಹುಬ್ಬಳ್ಳಿ: ‘ಕಾಂಗ್ರೆಸ್ ಪುರಾತನ ಕಾಲದಿಂದ ಕೆಲ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರು ಇಟ್ಟಿದೆ. ಅಲ್ಲೂ ಯೋಜನೆಗಳ ಹೆಸರು ಬದಲಿಸಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.
‘ಮನರೇಗಾ’ ಯೋಜನೆ ಹೆಸರು ಬದಲಾವಣೆಯಿಂದ ಯಾವ ಲಾಭವೂ ನಮಗಿಲ್ಲ. ಕಾಂಗ್ರೆಸ್‌ನ ಹಿಂದಿನ ಯಾವುದೇ ಯೋಜನೆಗಳಿಂದ ನಾವು ಕ್ರೆಡಿಟ್ ತೆಗೆದುಕೊಳ್ಳಲ್ಲ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಮನರೇಗಾ’ ಬದಲು ‘ವಿಬಿ–ಜಿ ರಾಮ್ ಜಿ’ ಮಸೂದೆ ಎಂದು ಬದಲಾವಣೆಯಿಂದ ಯೋಜನೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನ ನಡೆದಿದೆ’ ಎಂದು ಹೇಳಿದರು.
₹5 ಸಾವಿರ ಕೋಟಿಗೆ ಮನವಿ: ‘ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಪ್ರಮುಖವಾಗಿ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ಆದ್ಯತೆ ನೀಡಬೇಕಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ₹5ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಕೇಳಿದ್ದೇವೆ’ ಎಂದರು.
‘ಜನವರಿ 14ರ ಬಳಿಕ ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಈ ಹಿಂದೆಯೇ ಹೇಳಿದ್ದೆ. ಸದನದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪರೋಕ್ಷವಾಗಿ ಇದನ್ನು ಒಪ್ಪಿಕೊಂಡಿದ್ದಾರೆ’ ಎಂದರು.
ಬಿಜೆಪಿಯವರು ಮೊದಲು ದೇಶಭಕ್ತರಾಗಲಿ: ಎಚ್.ಕೆ.ಪಾಟೀಲ
ಹುಬ್ಬಳ್ಳಿ: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಹೆಸರನ್ನು ಬದಲಾಯಿಸಿದ್ದಾರೆ ಎಂದರೆ ಬಿಜೆಪಿಯವರಿಗೆ ದೇಶಭಕ್ತಿ ಇಲ್ಲವೆಂದೇ ಅರ್ಥ. ಮೊದಲು ಬಿಜೆಪಿಯವರು ದೇಶಭಕ್ತರಾಗಲಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಗೌರವಿಸಲಿ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಯಾವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವು ‘ಮನರೇಗಾ’ ಯೋಜನೆ ಹೆಸರನ್ನು ಬದಲಿಸಿದೆ? ಗ್ರಾಮ ಸ್ವರಾಜ್ ಪರಿಕಲ್ಪನೆ ಮತ್ತು ರಾಮ ರಾಜ್ಯದ ಆದರ್ಶ ಗಾಂಧೀಜಿಯವರ ಪ್ರಜ್ಞೆಯ ಎರಡು ಸ್ತಂಭಗಳಾಗಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.