ADVERTISEMENT

ಹುಬ್ಬಳ್ಳಿ: ಸೇಡಿನ ರಾಜಕೀಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 8:32 IST
Last Updated 25 ಡಿಸೆಂಬರ್ 2020, 8:32 IST
ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು.
ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು.   

ಹುಬ್ಬಳ್ಳಿ: ಅಮರಗೋಳದ ಆಶ್ರಯ ಕಾಲೊನಿಗೆ ಮಹಾತ್ಮ ಗಾಂಧಿ ಕಾಲೊನಿ ಎಂದಿದ್ದು, ಅದನ್ನು ಅಟಲ್ ನಗರ ಎಂದು ಹೆಸರಿಸುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು.

ಬಿಜೆಪಿ ಮುಖಂಡರು ಹಮ್ಮಿಕೊಂಡಿದ್ದ ಅಟಲ್ ನಗರ ನಾಮಕರಣ ಸಮಾರಂಭದ ಕೂಗಳತೆ ದೂರದಲ್ಲಿ ಧರಣಿ ಮಾಡಿದರು.

ಮಹಾತ್ಮ ಗಾಂಧಿ ಅವರ ಹೆಸರನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾರ್ಯಕ್ರಮಕ್ಕೆ ಹೊರಟಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದಗೆ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಮನವಿ ಸಲ್ಲಿಸಿದರು.

ಬೆಲ್ಲದ ಮಾತನಾಡಿ, ಈ ಬಗ್ಗೆ ಪರಿಶೀಲಿಸುವೆ. ಈಗಾಗಲೇ ಮಹಾತ್ಮ ಗಾಂಧಿ ಅವರ ಹೆಸರಿದ್ದರೆ ಬದಲಾಯಿಸುವುದಿಲ್ಲ. ಬೇರೆ ಕಡೆಗೆ ಅಟಲ್ ಅವರ ಹೆಸರಿಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.