ADVERTISEMENT

ಧಾರವಾಡ: ನಿವೇಶನ ನೀಡದ್ದಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:49 IST
Last Updated 28 ಜನವರಿ 2026, 7:49 IST
   

ಧಾರವಾಡ: ಮುಂಗಡ ಹಣ ಪಡೆದು, ಖರೀದಿದಾರರಿಗೆ ನಿವೇಶನ ನೀಡದ ಪ್ರಕರಣದಲ್ಲಿ ಪೃಥ್ವಿ ಬಿಲ್ಡರ್‌–ಡೆವಲಪರ್ಸ್‌ ಪಾಲುದಾರ ಶಿವನಗೌಡ ಪಾಟೀಲ ಅವರಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಖರೀದಿದಾರರಿಗೆ ಕೊಡಬೇಕಿದ್ದ ಬಾಕಿ ₹3.62 ಲಕ್ಷಕ್ಕೆ ವಾರ್ಷಿಕ ಶೇ 10ರಷ್ಟು ಬಡ್ಡಿ ಲೆಕ್ಕ ಹಾಕಿ ಒಟ್ಟು ಮೊತ್ತ ಪಾವತಿಸಬೇಕು. ₹ 50 ಸಾವಿರ ಪರಿಹಾರ ಹಾಗೂ ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ  ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?

ADVERTISEMENT

ಪೃಥ್ವಿ ಬಿಲ್ಡರ್–ಡೆವಲಪರ್ಸ್‌ನ ಪಾಲುದಾರ ಶಿವನಗೌಡ ಪಾಟೀಲ ಅವರು ಧಾರವಾಡ ತಾಲ್ಲೂಕಿನ ತಡಸಿನಕೊಪ್ಪದಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಬಡಾವಣೆಯಲ್ಲಿ ಬೆಂಗಳೂರಿನ ವಿನಯ ಪಾಟೀಲ ಮತ್ತು ಆನಂದ ಗೋನಿ ಅವರು ನಿವೇಶನ ಖರೀದಿಸಿದ್ದರು. ₹5.62 ಲಕ್ಷ ಹಣ ಪಾವತಿಸಿ ಕರಾರು ಮಾಡಿಕೊಂಡಿದ್ದರು.

ಬಡಾವಣೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸದ ಶಿವನಗೌಡ ಅವರಿಗೆ ಹಣ ವಾಪಸ್‌ ಕೊಡುವಂತೆ ಕೇಳಿದ್ದರು. ₹2 ಲಕ್ಷ ವಾಪಸ್‌ ನೀಡಿ, ಬಾಕಿ ಹಣ ನೀಡಿರಲಿಲ್ಲ. ಹಾಹಾಗಿ, ವಿನಯ ಪಾಟೀಲ ಮತ್ತು ಆನಂದ ಗೋನಿ ಅವರು 2025ರ ಸೆ.26ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.