ಕಲುಷಿತ ನೀರು ಕುಡಿದು ಅಸ್ಡವ್ಯಸ್ತಗೊಂಡ ಗುಡಿಸಾಗರ ಗ್ರಾಮದ ಜನರು ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ನವಲಗುಂದ: ಗ್ರಾಮದ ಕೆರೆಯಲ್ಲಿರುವ ನೀರನ್ನು ಕುಡಿದು 30ಕ್ಕೂ ಹೆಚ್ಚು ಜನರು ಅಸ್ತವ್ಯಸ್ಥಗೊಂಡ ಘಟನೆ ಮಂಗಳವಾರ ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಕೆರೆಯಲ್ಲಿ ಸ್ಚಚ್ಛತೆ ಇಲ್ಲದೇ ನೀರು ಕಲುಷಿತಗೊಂಡಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಆರೋಪಿಸಿದ್ದು. ಗ್ರಾಮದಲ್ಲಿ ಈ ಹಿಂದೆ ಮಲಪ್ರಭಾ ಕಾಲುವೆಯಿಂದ ಕೆರೆಗೆ ನೀರು ತುಂಬಿಸಿಕೊಳ್ಳುವ ಸಂದರ್ಭದಲ್ಲಿಯೂ ಗ್ರಾಮ ಪಂಚಾಯಿತಿಯವರು ಮೊದಲಿದ್ದ ಕಲುಷಿತ ನೀರನ್ನು ಹೊರ ಹಾಕದೇ ಅದೇ ನೀರಿನಲ್ಲಿ ಹೊಸದಾಗಿ ನೀರು ತುಂಬಿಸಿದ್ದರಿಂದ ನೀರು ಮತ್ತಷ್ಟು ನೀರು ಕಲುಷಿತಗೊಂಡಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಕೆರೆಯಲ್ಲಿರುವ ನೀರನ್ನು ನಲ್ಲಿಗಳ ಮೂಲಕ ಪೂರೈಸಲಾಗುತ್ತಿದ್ದರೂ ಕೆರೆ ನೀರಿನ ನಿರ್ವಹನೆ ಹಾಗೂ ನೀರು ಶುದ್ದೀಕರಣವಿಲ್ಲದಿರುವುದರಿಂದ ಅದೇ ನೀರನ್ನು ಕುಡಿದ ಗ್ರಾಮಸ್ಥರು ಮಂಗಳವಾರ ಏಕಾಏಕಿ ಅಸ್ತವ್ಯಸ್ಥಗೊಂಡಿದ್ದು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 16 ಜನ ನವಲಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ
ತಹಶೀಲ್ದಾರ್ ಸುಧೀರ ಸಾಹುಕಾರ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
‘ಗುಡಿಸಾಗರ ಗ್ರಾಮದ ಕೆರೆ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ. ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮಸ್ಥರು ನೀರು ಕುಡಿಯಬಾರದು ಎಂದು ಮನೆ, ಮನೆಗೆ ತೆರಳಿ ಗ್ರಾಸ್ಥರಿಗೆ ತಿಳಿಸುವಂತೆ ಸೂಚಿಸಲಾಗಿದೆ. ಬುಧವಾರದಿಂದ ಗ್ರಾಮಕ್ಕೆ ಟ್ಯಾಂಕರ್ ಕ ನೀರು ಪೂರೈಸಲಾಗುತ್ತಿದ್ದು. ನಂತರ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಪಡೆದು ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್ ಸುಧೀರ್ ಸಾಹುಕಾರ ತಿಳಿಸಿದರು.
ಕಲುಷಿತ ನೀರು ಕುಡಿದ ಪರಿಣಾಮದಿಂದಾಗಿ ಗ್ರಾಮಸ್ಥರಲ್ಲಿ ವಾಂತಿ ಭೇದಿ ಆಗುತ್ತಿದ್ದು ಆಸ್ಪತ್ರೆಗೆ ದಾಖಲಾದ ಎಲ್ಲರೂ ಎರಡು ದಿನಗಳಲ್ಲಿ ಗುಣಮುಖರಾಗಲಿದ್ದಾರೆಡಾ.ಅಜೇಯ ಪಿ ಆಸ್ಪತ್ರೆ ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.