ADVERTISEMENT

ಧಾರವಾಡ | ಬೂಸ್ಟರ್ ಡೋಸ್ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 6:40 IST
Last Updated 11 ಜನವರಿ 2022, 6:40 IST
ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೂಸ್ಟರ್ ಡೋಸ್‌ ಲಸಿಕಾಕರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ಮಾತನಾಡಿದರು
ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೂಸ್ಟರ್ ಡೋಸ್‌ ಲಸಿಕಾಕರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ಮಾತನಾಡಿದರು   

ಅಳ್ನಾವರ: ಉಚಿತ ಲಸಿಕೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಭಾಗದ ಎಲ್ಲ ಅರೋಗ್ಯ
ಇಲಾಖೆ ಸಿಬ್ಬಂದಿ, ಮಂಚೂಣಿ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರು ತಪ್ಪದೆ ಬೂಸ್ಟರ್‌ ಡೋಸ್‌ ಪಡೆದು ಅರೋಗ್ಯ ಕಾಪಾಡಿಕೊಳ್ಳಿ ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬೂಸ್ಟರ್‌ ಡೋಸ್‌ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಪಾತ್ರ ಹಿರಿದು. ಶಾಲಾ, ಕಾಲೇಜುಗಳಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಕೂಡಾ ಉತ್ತಮ ಸ್ಪಂದನೆ
ದೊರೆಯುತ್ತಿದೆ ಎಂದರು.

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್ ಮಾತನಾಡಿ, ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ. ಆರೋಗ್ಯ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ ಎಂದರು.

ADVERTISEMENT

ಅನಿಲಕುಮಾರ ಜಾಲಗೇರ, ಡಾ. ಎನ್.ಎಸ್. ಪಾಟೀಲ, ಎಲ್.ಐ. ಪತ್ತಾರ, ಆರ್.ಎಸ್.ಮಠ, ಮಧುಸೂಧನ ಕೆರೂರ, ಮುಖ್ಯಾಧಿಕಾರಿ
ಮಂಜುನಾಥ ಗುಳೇದ, ನಾಗರಾಜ ಗುರ್ಲಹೂಸುರ, ಸಾವಿತ್ರಿ ಬಡಿಗೇರ, ಜೆ.ಆರ್. ಕುಲಕರ್ಣಿ, ಸಾವಿತ್ರಿ ನಾಗನೂರ, ವಿನೋಧ ಹೊಂಡದಕಟ್ಟಿ, ಸಾವಿತ್ರಿ ಬಳಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.