ಕಲಘಟಗಿ: ಪ್ರಸ್ತುತ ವರ್ಷ ಅತಿ ಹೆಚ್ಚು ಮಳೆಯಾದರೂ ಬೆಳೆ ಹಾನಿ ಸಮೀಕ್ಷೆಯಿಂದ ತಾಲ್ಲೂಕು ಅನ್ನು ಕೈಬಿಡಲಾಗಿದ್ದು, ಮರುಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಹಾಗೂ ರೈತ ಸಂಘಟನೆ ಮುಖಂಡರು ಸೋಮವಾರ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರು.
ರೈತರು ಸಾಲ, ಶೂಲ ಮಾಡಿ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಗೆ ಮೆಕ್ಕೆಜೋಳ, ಸೋಯಾಬಿನ್ ಇತರೆ ಬೆಳೆಗಳು ಹಾನಿ ಸಂಭವಿಸಿದೆ. ಜಿಲ್ಲೆಯ ಕಲಘಟಗಿ- ಅಳ್ಳಾವರ ಹೊರತುಪಡಿಸಿ ಉಳಿದ ತಾಲ್ಲೂಕು ಬೆಳೆ ಹಾನಿ ಪಟ್ಟಿಗೆ ಸೇರ್ಪಡೆಯಾಗಿ ಇಲ್ಲಿನ ರೈತ ವರ್ಗಕ್ಕೆ ಅನ್ಯಾಯವೆಸಗಿದ್ದಾರೆ. ಇಲ್ಲಿನ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಇರುವದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.
ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನು ಪರಿಶೀಲಿಸಿ ಬೆಳೆ ಹಾನಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವದು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ವೀರಪ್ಪ ಶೀಗಿಗಟ್ಟಿ, ಹನುಮಂತಪ್ಪ ಕಲ್ಲವಡ್ಡರ, ಚಂದ್ರಯ್ಯ ಕುರಡಿಕೇರಿ ಬಸಪ್ಪ ಧಾರವಾಡ,ಬಸವರಾಜ ಕೊಪ್ಪದ ಗಾಣಿಗೇರ, ಚನ್ನಪ್ಪ ಹುಬ್ಬಳ್ಳಿ, ಮಾರುತಿ ಬೆನಕಣ್ಣವರ, ಮಹದೇವಪ್ಪ ಬಾರಕೇರ, ಕಲ್ಲಪ್ಪ ಕೀರೆಸೂರ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.