
ಧಾರವಾಡ: ನಗರದ ಕಮಲಾಪುರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ (ನಂಬರ್4) ಮೂರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಅಪಹರಿಸಿ ಕರೆದೊಯ್ದಿದ್ದ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪೊಲೀಸರಿಗೆ ಸಿಕ್ಕಿಬಿದ್ದಿದ್ಧಾನೆ. ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಆಸ್ಮಿನಗರದ ಅಬ್ದುಲ್ ಕರೀಂ ಮೇಸ್ತಿ (50) ಸಿಕ್ಕಿಬಿದ್ದ ಆರೋಪಿ. ತನ್ವೀರ್ ದೊಡ್ಡಮನಿ ಮತ್ತುಲಕ್ಷ್ಮೀ ಕರೆಪ್ಪನವರ ಅವರನ್ನು ರಕ್ಷಿಸಲಾಗಿದೆ.
‘ಅಬ್ದುಲ್ ಕರೀಂ ಮಧ್ಯಾಹ್ನ ಶಾಲೆಯಿಂದ ವಿದ್ಯಾರ್ಥಿಗಳನ್ನು ಅಪಹರಿಸಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಸಿ.ಸಿ ಟಿವಿ ಕ್ಯಾಮೆರಾದ ಫೋಟೆಜ್‌ಗಳನ್ನು ನೀಡಿದೆವು’ ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ವಿ.ಜಿ.ಕಂಬಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರೋಪಿಯ ಬೈಕ್‌ನಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ದಾಂಡೇಲಿ ಸಮೀಪ ‘ಸ್ಕಿಡ್" ಆಗಿ ಬಿದ್ದಿದ್ದಾರೆ. ಆರೋಪಿ ತಲೆ ಮತ್ತು ಕೈಗೆ ಗಾಯವಾಗಿದ್ದು, ಜೋಯಿಡಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ರಕ್ಷಿಸಲಾಗಿದೆ. ಉಳವಿ ಜಾತ್ರೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದೆ ಎಂದು ಆರೋಪಿ ಹೇಳಿದ್ಧಾನೆ’ ಎಂದು ಪೊಲೀಸರು ತಿಳಿಸಿದರು.
ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.