ಹುಬ್ಬಳ್ಳಿ: ಗುಂತಕಲ್–ಬಳ್ಳಾರಿ ನಡುವೆ ಸಂಚರಿಸುತ್ತಿದ್ದ ಡೆಮೊ ರೈಲು ಜುಲೈ 19ರಿಂದ ಅ. 10ರ ವರೆಗೆ ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚಾರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಭಾಗಶಃ ರದ್ದು:
ತಿರುಪತಿ–ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು ಆ. 18ರಿಂದ ಅ. 10ರ ತನಕ ಬುಧವಾರ ಹೊರತು ಪಡಿಸಿ ಉಳಿದ ದಿನ ಗುಂತಕಲ್–ಕದಿರಿದೇವರಪಲ್ಲಿ ನಡುವೆ ಸಂಚರಿಸುವುದಿಲ್ಲ. ಆಂಧ್ರದ ಅನಂತಪುರ ಜಿಲ್ಲೆಯಲ್ಲಿರುವ ಕದಿರಿದೇವರಪಲ್ಲಿ–ಗುಂತಕಲ್ ನಡುವಿನ ಸಂಚಾರ ಆ. 19ರಿಂದ ಅ. 7ರ ತನಕ ಭಾಗಶಃ ರದ್ದಾಗಲಿದೆ.
ನಿಲುಗಡೆ: ತಿರುಪತಿ–ಛತ್ರಪತಿ ಸಾಹು ಮಹಾರಾಜ್ ಎಕ್ಸ್‌ಪ್ರೆಸ್ ರೈಲು ಜು. 25ರಂದು ಮುನಿರಾಬಾದ್‌ನಲ್ಲಿ ಮತ್ತು ಹುಬ್ಬಳ್ಳಿ–ತಿರುಪತಿ ಪ್ಯಾಸೆಂಜರ್ ರೈಲು ಹಿಟ್ನಾಳನಲ್ಲಿ ಪ್ರಾಯೋಗಿಕವಾಗಿ ನಿಲುಗಡೆಯಾಗಲಿದೆ.
ರೈಲು ನಿಲುಗಡೆ: ಸಂದಲ್ ಹಾಗೂ ಉರುಸ್ ಶರೀಫ್ ನಡೆಯಲಿರುವ ಕಾರಣ ಕೆಲ ರೈಲುಗಳು ಬಾಣಾವಾರದಲ್ಲಿ ಐದು ದಿನ ಒಂದು ನಿಮಿಷ ನಿಲುಗಡೆಯಾಗಲಿವೆ.
ಮೈಸೂರು–ಹುಬ್ಬಳ್ಳಿ ಎಕ್ಸ್‌ಪ್ರೆಸ್ (ಮಧ್ಯಾಹ್ನ 12.40ಕ್ಕೆ), ಹರಿಹರ–ಯಶವಂತಪುರ ಎಕ್ಸ್‌ಪ್ರೆಸ್ (ಬೆ. 8.44), ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ಬೆ. 9.05), ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (ಸಂಜೆ 6.34), ಯಶವಂತಪುರ–ಹರಿಹರ ಎಕ್ಸ್‌ಪ್ರೆಸ್ (ಸಂ. 7.25) ಮತ್ತು ಹುಬ್ಬಳ್ಳಿ–ಮೈಸೂರು ಎಕ್ಸ್‌ಪ್ರೆಸ್ (ಮ. 1.29ಕ್ಕೆ) ನಿಲ್ಲಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.