ಹುಬ್ಬಳ್ಳಿ: ‘ಪಹಲ್ಗಾಮ್ ದಾಳಿ ಸೇರಿ ವಿವಿಧ ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿದ್ದೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಗೆ ಕಾರಣ ಆಗಿರಬ ಹುದು’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
‘ಪಹಲ್ಗಾಮ್ ದಾಳಿ,ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ಹಣ ಪತ್ತೆ, ಇ.ಡಿ ದುರ್ಬಳಕೆ ಕುರಿತು ಚರ್ಚಿಸಲು ಕಾಂಗ್ರೆಸ್ ಅವಕಾಶ ಕೇಳಿತ್ತು. ಧನಕರ್ ಅವಕಾಶ ನೀಡಿದ್ದರು’ ಎಂದು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆಗೆ ಸಂಬಂಧಿಸಿದ ಬೆಳವಣಿಗೆ ಕುರಿತು ವಿಸ್ತೃತ ಚರ್ಚೆ ಆಗಬೇಕು. ಜನರಿಗೆ ಸತ್ಯ ಗೊತ್ತಾಗಬೇಕು’ ಎಂದು ಹೇಳಿದರು.
‘ಪ್ರಜಾಪ್ರಭುತ್ವ ಇಲ್ಲ ಎಂಬುದು ಸಾಬೀತು’ ವಿಜಯಪುರ: ‘ಉಪ ರಾಷ್ಟ್ರಪತಿ ಅವರ ದಿಢೀರ್ ರಾಜೀನಾಮೆಯಿಂದ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂಬುದು ಸಾಬೀತಾಗಿದೆ’ ಎಂದು ಸಚಿವ ಸಂತೋಷ ಲಾಡ್ ಬುಧವಾರ ಇಲ್ಲಿ ಹೇಳಿದರು. ‘ಉಪರಾಷ್ಟ್ರಪತಿ ಯಾವುದೋ ಒತ್ತಡದಿಂದ ರಾಜೀನಾಮೆ ನೀಡಿರಬೇಕು. ಸ್ವಇಚ್ಛೆಯಿಂದ ಕೊಟ್ಟಿದ್ದಾರೆ ಎಂಬುದು ಬಿಜೆಪಿಯವರರ ಕಟ್ಟುಕಥೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.