ADVERTISEMENT

ಹುಬ್ಬಳ್ಳಿ: ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ; ಖಂಡನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:47 IST
Last Updated 21 ಆಗಸ್ಟ್ 2025, 4:47 IST
ಹುಬ್ಬಳ್ಳಿಯ ಮಿನಿವಿಧಾನ ಸೌಧದ ಎದುರು ಬುಧವಾರ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಮಿನಿವಿಧಾನ ಸೌಧದ ಎದುರು ಬುಧವಾರ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರ ಹಾಗೂ ಅಪಪ್ರಚಾರ ಖಂಡಿಸಿ ದಿಗಂಬರ ಜೈನ ಸಮಾಜದವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಂಚಗಾರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಿಂದ ಮಿನಿವಿಧಾನ ಸೌಧದವರೆಗೆ ಮೌನ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬಿಳಗಿ ಮಾತನಾಡಿ, ‘ಎಂಟು ನೂರು ವರ್ಷಗಳಿಂದ ಲಕ್ಷಾಂತರ ಜನರ ಧಾರ್ಮಿಕ, ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ವಿರುದ್ಧ ಕೆಲವು ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುತ್ತಾ ವೀರೇಂದ್ರ ಹೆಗ್ಗಡೆಯವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮುಖಂಡರಾದ ವಿಮಲ್ ತಾಳಿಕೋಟಿ, ಆರ್‌.ಟಿ.ತವನಪ್ಪನವರ, ಶಾಂತಿನಾಥ ಹೋತಪೇಟಿ, ವಸಂತ ಜೈನ್, ಸುಹಾಸ್ ಜವಳಿ, ಶ್ರೇಣಿಕರಾಜ್ ರಾಜಮಾನೆ, ವಿನಯ ಜವಳಿ, ಸಂತೋಷ ಪಾಟೀಲ, ಮನ್ಮಥ ಕ್ಯಾಸಾ, ರಾಜೇಂದ್ರ ದಿನಕರ, ಅಭಿನಂದನ ಒನಕುದುರೆ, ಅಜಯ ಬಿಳಗಿ, ಮದನಕುಮಾರ ದಂಡಾವತಿ, ಶಶಿಧರ ಬಳಗೇರ, ಧರಣೇಂದ್ರ ಜವಳಿ, ಅಜಿತ ಸಿರುಗುಪ್ಪಿ, ಸುಜಾತ ಗುಗ್ಗರಿ, ಪದ್ಮಶ್ರೀ ಹದಳಗಿ, ಚಂದನ ಜವಳಿ, ರತ್ನಾ ಉಪಾಧ್ಯ, ಚಂದನ ಬಿಳಗಿ, ಭಾರತಿ ಹಿರೇಗೌಡರ, ತವನಪ್ಪ ಶಿರಗುಪ್ಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.