ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಮಸೀದಿಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಹಿಂದೂ-ಮುಸ್ಲಿಮರು ‘ಗುತ್ತೇಸಾಬ್’ ಮತ್ತು ‘ಕಾಸೀಂದುಲೈಃ’ ಬೆಳ್ಳಿಯ ಪಾಂಜಾಗಳನ್ನು ಪ್ರತಿಷ್ಥಾಪಿಸಿ, ಪೂಜಿಸುತ್ತಿದ್ದಾರೆ.
ಗುತ್ತೇಸಾಬ್ ಎಂಬ ಪಾಂಜಾವನ್ನು ದೇಸಾಯಿ ಮನೆತನದವರು ಮಾಡಿಸಿಕೊಟ್ಟಿದ್ದು ವಿಶೇಷ. ಭಕ್ತರು ಸಕ್ಕರೆ, ಬೆಲ್ಲ, ಪುಠಾಣಿ, ನೈವೇದ್ಯ, ಉದುಬತ್ತಿ, ಲೋಬಾನ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ನಮಿಸುತ್ತಿದ್ದಾರೆ. ಕೆಲವರು ಹುಲಿವೇಷ ಧರಿಸಿ ಹರಕೆ ತಿರಿಸುತ್ತಿದ್ದಾರೆ.
ಜುಲೈ 6ರಂದು ಮೊಹರಂ ಆಚರಣೆ ನಡೆಯಲಿದೆ. ಮಧ್ಯಾಹ್ನ ಪಾಂಜಾ ಮತ್ತು ಡೋಲಿಗಳ ಮೆರವಣಿಗೆ ಸಂಜೆ ಹೊಳೆಗೆ ತೆರಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.