
ಧಾರವಾಡ: ನಗರದ ರೆವಿನ್ಯೂ ಕಾಲೊನಿಯ ಧರ್ಮಶಾಸ್ತ್ರ ಸೇವಾ ಸಮಿತಿ ವತಿಯಿಂದ ಅಯ್ಯಪ್ಪ ಸ್ವಾಮಿ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಈಚೆಗೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಸಂಜೆ ರೆವೆನ್ಯೂ ಕಾಲೊನಿಯಿಂದ ಶಿರಡಿ ಸಾಯಿ ಬಾಬಾ ಮಂದಿರ, ದಾಸನಕೊಪ್ಪ ವೃತ್ತ, ಸಪ್ತಾಪೂರ, ಜಯನಗರ, ಶ್ರೀನಗರ ಬಡಾವಣೆಗಳಲ್ಲಿ ಸಂಚರಿಸಿ ಮರಳಿ ಸಾಯಿ ಬಾಬಾ ಮಂದಿರದವರೆಗೆ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಯಿತು. ಭಜನಾ ಮೇಳಗಳು, ಚಂಡೆ, ಜಗ್ಗಲಗಿ, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಸೇವಾ ಸಮಿತಿ ಸಂಸ್ಥಾಪಕ ರಮೇಶ ಪಾತ್ರೋಟ, ಮಾಧವಾನಂದ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ಬಿಡಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ, ಮೇಯರ್ ಜ್ಯೋತಿ ಪಾಟೀಲ, ಸವಿತಾ ಅಮರಶೆಟ್ಟಿ ಮಹೇಶ ಶೆಟ್ಟಿ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಮಂಜುನಾಥ ಬಟ್ಟೆಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.