ADVERTISEMENT

ಧಾರವಾಡ–ಬೆಳಗಾವಿ ವಿಶೇಷ ರೈಲು ಸಂಚಾರ ಮಾ.6ರಿಂದ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 16:20 IST
Last Updated 4 ಮಾರ್ಚ್ 2023, 16:20 IST

ಹುಬ್ಬಳ್ಳಿ: ಧಾರವಾಡ– ಬೆಳಗಾವಿ ಮಾರ್ಗದ ಮಧ್ಯೆ ಮಾ.6ರಿಂದ ಸೆಪ್ಟೆಂಬರ್‌ 6ರವರೆಗೆ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಧಾರವಾಡದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ (ಗಾಡಿ ಸಂಖ್ಯೆ 07357) ರೈಲು ಅಳ್ನಾವರ, ಲೋಂಡಾ, ಖಾನಾಪುರ ಮಾರ್ಗವಾಗಿ 10.45ಕ್ಕೆ ಬೆಳಗಾವಿ ತಲುಪಲಿದೆ. ಅಲ್ಲಿಂದ ರಾತ್ರಿ 7.30ಕ್ಕೆ ಹೊರಟು (07358) 9.55ಕ್ಕೆ ಧಾರವಾಡ ತಲುಪಲಿದೆ.

ಎ.ಸಿ, ಸ್ಲೀಪರ್‌, ಸಾಮಾನ್ಯ ಸೇರಿದಂತೆ 22 ಬೋಗಿಗಳನ್ನು ರೈಲು ಹೊಂದಿದೆ. ಈ ಅವಧಿಯಲ್ಲಿ ಧಾರವಾಡ–ಹುಬ್ಬಳ್ಳಿ–ಧಾರವಾಡ (07363/07364) ರೈಲು ಸಂಚಾರ ರದ್ದಾಗಲಿದೆ.

ADVERTISEMENT

ಈ ರೈಲು ಸಂಚರಿಸುವ ಕಾರಣ ಮಾರ್ಚ್‌ 6ರಂದು ಧಾರವಾಡ– ಮೈಸೂರು ಎಕ್ಸ್‌ಪ್ರೆಸ್‌ ( 17302), ಮೀರಜ್‌–ಕೆಎಸ್‌ಆರ್‌ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ (16590), 8ರಂದು ಹಜರತ್‌ ನಿಜಾಮುದ್ದೀನ್‌–ಯಶವಂತಪುರ ಸಂಪರ್ಕಕ್ರಾಂತಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (12630), 4ರಂದು ಚಂಡಿಗಢ–ಯಶವಂತಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (22686), 10ರಂದು ಪಂಢರಪುರ–ಯಶವಂತಪುರ ಎಕ್ಸ್‌ಪ್ರೆಸ್‌ (16542) ತಡವಾಗಿ ಸಂಚರಿಸಲಿವೆ.

ತಾತ್ಕಾಲಿಕ ನಿಲುಗಡೆ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಆರು ತಿಂಗಳವರೆಗೆ ಪ್ರಾಯೋಗಿಕ ಆಧಾರದಲ್ಲಿ ಒಂದು ನಿಮಿಷ ನಿಲುಗಡೆ ಮಾಡಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.

ಮಾ.5ರಿಂದ ಹುಬ್ಬಳ್ಳಿ–ದಾದರ್ (17317) ಹಾಗೂ ಮಾರ್ಚ್‌ 4ರಿಂದ ದಾದರ್– ಹುಬ್ಬಳ್ಳಿ (17318) ರೈಲು ಚಿಕ್ಕೋಡಿ ರೋಡ್‌ ನಿಲ್ದಾಣದಲ್ಲಿ, 5ರಿಂದ ಮೈಸೂರು–ಬಾಗಲಕೋಟೆ (17307) ಹಾಗೂ 6ರಿಂದ ಬಾಗಲ ಕೋಟೆ–ಮೈಸೂರು ( 17308) ರೈಲು ಇಬ್ರಾಹಿಂಪುರ ಹಾಲ್ಟ್‌ನಲ್ಲಿ, 7ರಿಂದ ಹುಬ್ಬಳ್ಳಿ–ಕಾರಟಗಿ (17303) ಹಾಗೂ ಹಾಗೂ ಕಾರಟಗಿ–ಹುಬ್ಬಳ್ಳಿ (17304) ರೈಲುಗಳು ಬನ್ನಿಕೊಪ್ಪ ನಿಲ್ದಾಣದಲ್ಲಿ ನಿಲ್ಲಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.