ಅಪಘಾತ
–ಪ್ರಾತಿನಿಧಿಕ ಚಿತ್ರ
ಧಾರವಾಡ: ವಿದ್ಯಾಗಿರಿಯ ಜೆಎಸ್‌ಎಸ್ ವಿದ್ಯಾಲಯದ ಕಾಂಪೌಂಡ್‌ಗೆ ಬಿಆರ್‌ಟಿಎಸ್ ಚಿಗರಿ ಬಸ್ ಶನಿವಾರ ಡಿಕ್ಕಿಹೊಡೆದು ಗೇಟು, ಗೋಡೆಗೆ ಹಾನಿಯಾಗಿದೆ ಎಂದು ಸಂಚಾರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೊಪ್ಪದ ಕೇರಿಯ ಬಸವರಾಜ ಅವರು ದೂರು ನೀಡಿದ್ಧಾರೆ. ಚಾಲಕ ಚಿಗರಿ ಬಸ್ ಅನ್ನು ವೇಗವಾಗಿ ಚಲಾಯಿಸಿ ಕಾಲೇಜಿನ ಕಾಂಪೌಂಡಿಗೆ ಗುದ್ದಿಸಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ಧಾರೆ.
ಗೋಡೆ, ಗೇಟು ರಿಪೇರಿ ಮಾಡಿಸುವಂತೆ ಬಿಆರ್‌ಟಿಎಸ್‌ನವರಿಗೆ ತಿಳಿಸಲಾಗುವುದು ಎಂದು ಜೆಎಸ್‌ಎಸ್ ವಿದ್ಯಾಲಯದ ಮಹಾವೀರ ಉಪಾಧ್ಯೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
’ನಷ್ಟ ಪರಿಹಾರ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ಸಾರಿಗೆಯವರು (ಎನ್‌ಡಬ್ಲುಕೆಆರ್‌ಟಿಸಿ) ಕ್ರಮ ವಹಿಸುವರು. ಸಂಚಾರ ಪೊಲೀಸರು, ಸಾರಿಗೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಪಡೆಯಲಾಗುವುದು, ಜೆಎಸ್‌ಎಸ್ ಕಾಲೇಜು ಬಳಿ ‘ಸ್ಕೈ ವಾಕ್’ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.