
ಪ್ರಜಾವಾಣಿ ವಾರ್ತೆ
ಧಾರವಾಡ: ಇಲ್ಲಿನ ಶಿರಡಿನಗರದ ಸಾಧುನವರ ಎಸ್ಟೇಟ್ ಭಾಗದಲ್ಲಿ ಬುಧವಾರ ನಾಯಿಯೊಂದು ಇಬ್ಬರು ಮಕ್ಕಳು ಸಹಿತ 7 ಮಂದಿಗೆ ಕಚ್ಚಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ಧಾರೆ.
ಗಂಗವ್ವ ಉಪ್ಪಾರ್ (66), ಮಲ್ಲಿಕಾರ್ಜುನ (56), ಶೀತಲ್ ಕಬಾಡಿ (48), ಲಕ್ಷ್ಮಿ( 45), ಪ್ರಸಾದ್ (24), ಭೂಮಿಕಾ (13) ಹಾಗೂ ರಕ್ಷಿತ್ (5) ಗಾಯಗೊಂಡವರು.
‘ಗಾಯಗೊಂಡಿದ್ದ ರಕ್ಷಿತ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ಕಳಿಸಲಾಗಿದೆ. ಗಂಗವ್ವ, ಶೀತಲ್ ಮತ್ತು ಲಕ್ಷ್ಮಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.