ಧಾರವಾಡ: ‘ನಗರದ ಕರ್ನಾಟಕ ಕಾಲೇಜು (ಕೆಸಿಡಿ) ಕಟ್ಟಡ ವಿಶಿಷ್ಟವಾಗಿದೆ. ಈ ಪಾರಂಪರಿಕ ಕಟ್ಟಡವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು’ ಎಂದು ಕೆಸಿಡಿ ಪ್ರಾಚಾರ್ಯ ಪ್ರೊ.ಐ.ಸಿ.ಮುಳಗುಂದ ಹೇಳಿದರು.
ಕರ್ನಾಟಕ ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕಾಲೇಜಿನ ಆವರಣದ ರೊದ್ದ ಶ್ರೀನಿವಾಸರಾವ್, ಅರಟಾಳ ರುದ್ರಗೌಡ ಮತ್ತು ಸಿದ್ದಪ್ಪ ಕಂಬಳಿ ಪ್ರತಿಮೆಗೆ ಈಚೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ಈ ಕಾಲೇಜು ಸ್ಥಾಪನೆಗೆ ಬ್ರಿಟಿಷರು ಠೇವಣಿ ಇಟ್ಟು ಮುನ್ನುಡಿ ಬರೆದರು. ಈ ಕಾಲೇಜು ಸ್ಥಾಪನೆ ನಿಟ್ಟಿನಲ್ಲಿ ರೊದ್ದ ಶ್ರೀನಿವಾಸರಾವ್, ಅರಟಾಳ ರುದ್ರಗೌಡ, ಸಿದ್ದಪ್ಪ ಕಂಬಳಿ, ಇತರರು ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕದ ಹಲವು ನಾಟಕ ಕಂಪನಿಗಳು ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ’ ಎಂದರು.
ಪ್ರೊ.ಎಂ.ಎಸ್.ಸಾಳುಂಕೆ, ಜಿಮಖಾನಾದ ಉಪಾಧ್ಯಕ್ಷೆ ಮಹಾದೇವಿ ಹಿರೇಮಠ, ಜಗದೀಶ ಗುಡಗೂರ, ಪ್ರೊ.ಜಿ.ಎಚ್.ಮಳಿಮಠ, ಎಂ.ಬಿ.ದಳಪತಿ, ಸುರೇಶ ಹುಲ್ಲನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.