
ಪ್ರಜಾವಾಣಿ ವಾರ್ತೆ
ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಕೌಶಲ ಮಿಷನ್ ವತಿಯಿಂದ ಫೆ.22 ರಂದು ನಗರದ ಕರ್ನಾಟಕ ಕಾಲೇಜು (ಕೆಸಿಡಿ) ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ.
ಉದ್ಯೋಗಾಕಾಂಕ್ಷಿಗಳು ಕ್ಯುಆರ್ ಕೋಡ್ ಬಳಸಿ ಹೆಸರು, ವಿವರ ನೋಂದಾಯಿಸಿ ಕೊಳ್ಳಬಹುದು. ಮೇಳದ ದಿನವೂ ಸ್ಥಳದಲ್ಲೇ ನೋಂದಾಯಿಸಿಕೊಳ್ಳಲೂ ಅವಕಾಶ ಇದೆ. ಬೆಳಿಗ್ಗೆ 9 ಗಂಟೆರಿಂದ ಸಂಜೆ 5 ಗಂಟೆ ವರೆಗೆ ಮೇಳ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.