ADVERTISEMENT

ಧಾರವಾಡ ಸಾಹಿತ್ಯ ಸಂಭ್ರಮ: ಹೆಚ್ಚುವರಿ 75 ಪ್ರತಿನಿಧಿಗಳ ನೋಂದಣಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 9:18 IST
Last Updated 3 ಜನವರಿ 2019, 9:18 IST
ಧಾರವಾಡ ಸಾಹಿತ್ಯ ಸಂಭ್ರಮ ಲಾಂಛನ
ಧಾರವಾಡ ಸಾಹಿತ್ಯ ಸಂಭ್ರಮ ಲಾಂಛನ   

ಧಾರವಾಡ:ಧಾರವಾಡ ಸಾಹಿತ್ಯ ಸಂಭ್ರಮ' 7ನೇ ಆವೃತ್ತಿಯು ಜ.18 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಬೇಡಿಕೆಯ ಆಧಾರದ ಮೇಲೆ ನೋಂದಣಿಗೆ ನೀಡಿದ್ದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ನಿರ್ದಿಷ್ಟಪಡಿಸಿದ್ದ ಸಂಖ್ಯೆಯ ಪ್ರತಿನಿಧಿಗಳ ನೋಂದಣಿ ಆಗಿದೆ. ಆದರೆ, ಹಲವರು ಈ ಸಂಖ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ಮತ್ತೆ 75 ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆಸಕ್ತರು www.dharwadsahityasambhrama.org ಜಾಲತಾಣದ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬಹುದು.ಕಾಲೇಜು ಶಿಕ್ಷಣ ಇಲಾಖೆಯವರು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ‘ಅನ್ಯಕಾರ್ಯ ನಿಮಿತ್ತ ರಜೆ’ (ಒಒಡಿ) ಸೌಲಭ್ಯ ನೀಡುವ ಆದೇಶ ಹೊರಡಿಸಿದ್ದಾಗಿ ಎಂದು ತಿಳಿಸಿದ್ದಾರೆ.

‘ಈ ಬಾರಿಯ ಸಂಭ್ರಮವನ್ನು ಡಾ.ಗಿರಡ್ಡಿ ಗೋವಿಂದರಾಜ ಅವರಿಗೆ ಅರ್ಪಿಸಲಾಗುತ್ತಿದೆ. ಸಾಂಸ್ಕೃತಿಕ ಸಂವಾದವನ್ನು ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ಚಿಂತಕ ಶಿವ ವಿಶ್ವನಾಥ, ‘ಉಚಲ್ಯಾ’ ಆತ್ಮಕಥೆ ಖ್ಯಾತಿಯ ಲಕ್ಷ್ಮಣ ಗಾಯಕವಾಡ ಮತ್ತು ಸಮುದಾಯದ ಪ್ರಸನ್ನ ಅವರು ವಿಶೇಷ ಉಪನ್ಯಾಸ ನೀಡುವರು ’ಎಂದು ತಿಳಿಸಿದ್ದಾರೆ.

ADVERTISEMENT

‘ಹೊಸ ತಲೆಮಾರಿನ ಲೇಖಕರ ಸಾಹಿತ್ಯ ಕುರಿತು ಎರಡು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಹಳೆಗನ್ನಡ ಸಾಹಿತ್ಯದ ಗಮಕ ವ್ಯಾಖ್ಯಾನ, ಜೀವನದ ಪರಿಕಲ್ಪನೆ ಕುರಿತು ನವೋದಯ ಕವಿಗಳ ಕಾವ್ಯವಾಚನ, ಶ್ರೀಕೃಷ್ಣ ಪಾರಿಜಾತ, ಜನಪದ ಕಲೆ ಮತ್ತು ತತ್ವ ಪದಗಳ ಗಾಯನದ ಪ್ರಾತ್ಯಕ್ಷಿಕೆ ಆಯೋಜಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.