
ಧಾರವಾಡ: 'ಜಗತ್ತಿನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ವಚನ ಸಾಹಿತ್ಯವು ಕೇವಲ ಒಂದು ಧರ್ಮಕ್ಕೆ ಸೀಮತವಾಗಿರದೆ, ಅವುಗಳು ಮಾನವ ಕುಲದ ಬದುಕಿಗೆ ದಿಕ್ಸೂಚಿಯಾಗಿವೆ' ಎಂದು ಮುಂಡರಗಿ ಸಂಸ್ಥಾನ ಮಠದ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.
ನಗರದ ಮುರುಘಾಮಠದಲ್ಲಿ ಶ್ರೀಮದಥಣಿ ಮುರಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರದಿಂದ ಪ್ರಾರಂಭವಾದ 'ವಚನ ದರ್ಶನ ಪ್ರವಚನ'ಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ವಚನ ದರ್ಶನದ ಪ್ರವಚನದ ಮೂಲಕ ಶರಣರ ತತ್ವಗಳು ಇಂದಿನ ಆಧುನಿಕ ಬದುಕಿಗೆ ಪ್ರಸ್ತುತವಾಗಿವೆ. ಇದನ್ನು ಹೊಸ ತಲೆಮಾರಿಗೂ ಪರಿಚಯಿಸಬೇಕು ಎಂದರು.
ಗರಗ ಮಡಿವಾಳೇಶ್ವರ ಮಠದ ಆತ್ಮಾರಾಮ ಸ್ವಾಮೀಜಿ ಶಿರಸಂಗಿ ಬಸವಮಹಾಂತ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಶಾಸಕಿ ಸೀಮಾ ಮಸೂತಿ, ಮಠದ ಆಡಳಿತ ಮಂಡಳಿ ಪದಾಧಿಕಾರಿಗಳಾದ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ.ಲಕ್ಹಮನಹಳ್ಳಿ, ವಿ.ಎಂ.ಕಟಗಿ, ಶಿವಾಜಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಗಾಣಿಗೇರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.