ADVERTISEMENT

ಧಾರವಾಡ | ರಸ್ತೆ, ಉದ್ಯಾನ ಅಭಿವೃದ್ಧಿಗೆ ಕಾಯಕಲ್ಪ

ಮನೆಗಳಿಗೆ ಮಳೆ ನೀರು ನುಗ್ಗುವ ಸಮಸ್ಯೆ ಪರಿಹ‌ರಿಸಲು ನಿವಾಸಿಗಳ ಮೊರೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 3:18 IST
Last Updated 29 ಆಗಸ್ಟ್ 2025, 3:18 IST
   

ಧಾರವಾಡ: ನಗರದ 6ನೇ ವಾರ್ಡ್‌, ಹಳೆಯ ಬಡಾವಣೆಗಳು, ಕಿರಿದಾದ ಓಣಿಗಳಿರುವ ಕಿಷ್ಕಿಂಧೆಯಂಥ ಪ್ರದೇಶವಾಗಿದ್ದರೂ ವಿವಿಧ ಬೀದಿಗಳಲ್ಲಿ ಇಂಟರ್‌ಲಾಕಿಂಗ್‌ ಸಿಮೆಂಟ್‌ ಇಟ್ಟಿಗೆಗಳ‌ ಅಳವಡಿಕೆ, ಅಭಿವೃದ್ಧಿಪಡಿಸಿದ ಎಂ.ಆರ್.ನಗರವು ಉದ್ಯಾನದ ಮೂಲಕ ಗಮನ ಸೆಳೆದಿದೆ.

ಇಲ್ಲಿ ಹಲವೆಡೆ ಕಾಂಕ್ರೀಟ್‌ ರಸ್ತೆ ನಿರ್ಮಾಣದೊಂದಿಗೆ ಚುನುಮರಿ ಬಟ್ಟಿ, ಮೇದಾರ ಓಣಿ, ಹೂಗಾರ ಓಣಿ, ಬಾರಾ ಇಮಾಮ್‌ ಗಲ್ಲಿ, ಮಸ್ತಾನ್ ಪ್ಲಾಟ, ನಿಜಾಮುದ್ದೀನ್‌ ಕಾಲೊನಿ, ಕಂಠಿ ಓಣಿಯಲ್ಲಿ ಇಂಟರ್‌ಲಾಕಿಂಗ್‌ ಸಿಮೆಂಟ್‌ ಇಟ್ಟಿಗೆಗಳ‌ನ್ನು ಅಳವಡಿಸಲಾಗಿದೆ.  

ಎಂ.ಆರ್. ನಗರದ ಉದ್ಯಾನದಲ್ಲಿ ವಿಹಾರ ಪಥ, ವ್ಯಾಯಾಮ ಉಪಕರಣ, ಆಟಿಕೆಗಳು, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ವಿವಿಧೆಡೆ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗೊಲ್ಲರ ಓಣಿಯ ಒಂದನೇ ವೃತ್ತದಲ್ಲಿ ಸ್ವಾಗತ ಕಮಾನು ನಿರ್ಮಾಣ ಸೇರಿದಂತೆ ವಿವಿಧೆಡೆ ಸಿಸಿ ರಸ್ತೆ ಹಾಗೂ ಗಟಾರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 

ADVERTISEMENT

‘ಹಾವೇರಿ ಪೇಟ ಬಡಾವಣೆಯ ಕೆಲವೆಡೆ ಮಣ್ಣಿನ ರಸ್ತೆಗಳಿವೆ. ಮಳೆಯಾದಾಗ ಇವು ಕೆಸರುಮಯವಾಗುತ್ತವೆ. ಕಂಠಿ ಓಣಿಯ ಉರ್ದು ಮಾದರಿ ಶಾಲೆಯ (ನಂಬರ್‌ 3) ಪಕ್ಕ ಸೇರಿದಂತೆ ಹಲವೆಡೆ ಕಸ ರಾಶಿ ಬಿದ್ದಿದೆ. ಕೆಲವೆಡೆ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಹಂದಿ, ಬೀದಿನಾಯಿಗಳ ಹಾವಳಿಯೂ ಇದ್ದು, ದೈವಜ್ಞ ನಗರದ ಮುಖ್ಯ ರಸ್ತೆಯಲ್ಲಿ ಬೀದಿದೀಪ ಇಲ್ಲವಾಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಧಾರವಾಡದ ನಿಜಾಮುದ್ದೀನ್‌ ಕಾಲೊನಿಯ ಮಸ್ತಾನ ಪ್ಲಾಟ್‍ನ ಬೀದಿಗೆ ಇಂಟರ್‌ಲಾಕಿಂಗ್ ಸಿಮೆಂಟ್ ಇಟ್ಟಿಗೆ ಅಳವಡಿಸಲಾಗಿದೆ
ಮಳೆ ನೀರು ಮನೆಗಳಿಗೆ ನುಗ್ಗುವ ಸಮಸ್ಯೆ ಪರಿಹಾರಕ್ಕೆ ಪ್ರಸ್ತಾಸ ಸಲ್ಲಿಸಲಾಗಿದೆ. ನೀರು ಪೂರೈಕೆ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಗಮನಹರಿಸಲಾಗುವುದು
ದಿಲ್‌ಷಾದ್‌ ಬೇಗಂ ನದಾಫ್‌ ಸದಸ್ಯೆ ಆರನೇ ವಾರ್ಡ್‌
ಹಾವೇರಿಪೇಟೆ ಕಂಠಿ ಓಣಿ ನದಾಫ್ ಓಣಿ ಕುರುಬರ ಓಣಿ ಸಾಲ್ಪೇಕರ್‌ ಓಣಿ ದ್ಯಾಮವ್ವನ ಗುಡಿ ಆಸುಪಾಸಿನ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಸಮಸ್ಯೆ ಪರಿಹರಿಸಿಲ್ಲ.
ಸಂಜೀವ ಆರ್.ಭೋಸ್ಲೆ ನಿವಾಸಿ ಹಾವೇರಿಪೇಟೆ

8 ದಿನಕ್ಕೊಮ್ಮೆ ನೀರು ಪೂರೈಕೆ

‘ವಾರ್ಡ್‌ನಲ್ಲಿ ಎಂಟು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ.  ಹಂಡೆ ಡ್ರಮ್ ತೊಟ್ಟಿಗಳಲ್ಲಿ ಸಂಗ್ರಹಿಸಬೇಕಾದ ಸ್ಥಿತಿ ಇದೆ. ಕೆಲ ಸಲ ಮಣ್ಣು ಮಿಶ್ರಿತ ನೀರು ಬರುತ್ತಿದೆ. ಗಟಾರ ಸಮಸ್ಯೆಯಿಂದ ಸೊಳ್ಳೆ ಕಾಟ ಹೆಚ್ಚಾಗಿದೆ’ ಎಂದು ಕಂಠಿ ಓಣಿ ನಿವಾಸಿ ಫಾತಿಮಾ ಗೋಲಂದಾಜ ಹೇಳಿದರು.   24X7 ನೀರು ಪೂರೈಕೆ ಯೋಜನೆ ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಹಲವೆಡೆ ರಸ್ತೆಯನ್ನೂ ಅಗೆಯಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ ಎನ್ನುತ್ತಾರೆ ನಿವಾಸಿಗಳು.

ಪ್ರಮುಖ ಬಡಾವಣೆಗಳು ಹಾವೇರಿಪೇಟ ಓಣಿ ಕಂಠಿ ಓಣಿ ಹೂಗಾರ ಓಣಿ ಇಂಡಿ ಓಣಿ ಬಾರಾಮುಲ್ಲಾ ಓಣಿ ಗೊಲ್ಲರ ಓಣಿ ಕಡ್ಡಿ ಬಡಾವಣೆ ಪೆಂಡಾರ ಓಣಿ ನಿಜಾಮುದ್ದೀನ್‌ ಕಾಲೊನಿ ಮಸ್ತಾನ ಪ್ಲಾಟ ದೈವಜ್ಞ ನಗರ ಎಂ.ಆರ್. ನಗರದ 7 ರಿಂದ 10 ನೇ ಕ್ರಾಸ್ ಬೇಡಿಕೆಗಳು ಹೂಗಾರ ಓಣಿಯಲ್ಲಿ ಉದ್ಯಾನ ನಿರ್ಮಿಸಬೇಕು  ಗೊಲ್ಲರ ಓಣಿಯಲ್ಲಿ ಸಮುದಾಯ ಭವನ ನಿರ್ಮಿಸಬೇಕು ಗೊಲ್ಲರ ಕಾಲೊನಿಯಲ್ಲಿ ಅಂಗನವಾಡಿ ಆರಂಭಿಸಬೇಕು ಸಂಕ್ಷಿಪ್ತ ಪರಿಚಯ ವಾರ್ಡ್ ಸಂಖ್ಯೆ;6 ಸದಸ್ಯೆ; ದಿಲ್‌ಷಾದ್‌ ಬೇಗಂ ನದಾಫ್‌ ಜನಸಂಖ್ಯೆ; 13688 ಒಟ್ಟು ಆಸ್ತಿ; 1719 ಅಂಗನವಾಡಿ ಕೇಂದ್ರಗಳು;11 ವಿದ್ಯುತ್ ಕಂಬ;301 ವಿದ್ಯುತ್ ದೀಪ;281 ದೂರವಾಣಿ ಸಂಖ್ಯೆ; 9845710008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.