
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಧಾರವಾಡ: ಗಾಂಧಿ ಚೌಕದ ನಿವಾಸಿ ಝಾಕಿಯಾ ಮುಲ್ಲಾ (21) ಶವ ರಸ್ತೆ (ಮನಸೂರು ಮಾರ್ಗ) ಬದಿ ಪತ್ತೆಯಾಗಿದೆ. ಯುವತಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ಧಾರೆ.
‘ಝಾಕಿಯಾ ಅವರು ಮಂಗಳವಾರ ಸಂಜೆ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿದ್ದರು. ಕುಟುಂಬದವರು ಹುಡುಕಾಡಿದ್ದರು. ಬುಧವಾರ ಬೆಳಿಗ್ಗೆ ಮನಸೂರು ರಸ್ತೆಯಲ್ಲಿ ಶವ ಸಿಕ್ಕಿದೆ. ಕುತ್ತಿಗೆ ಭಾಗದಲ್ಲಿ ಬಿಗಿದಿರುವ ಗುರುತು ಇದೆ. ಝಾಕಿಯಾ ಅವರು ಪ್ಯಾರಾ ಮೆಡಿಕಲ್ ಕೋರ್ಸ್ ಪೂರೈಸಿದ್ದರು. ಕೆಲಸಕ್ಕಾಗಿ ಒಬ್ಬರನ್ನು ಭೇಟಿಯಾಗಲು ಹೋಗುವುದಾಗಿ ಮನೆಯವರಿಗೆ ಹೇಳಿ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದ್ಧಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಗ್ರಾಮೀಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.