ADVERTISEMENT

ರೈಲಿನಲ್ಲಿ ಡಿಜಿಟಲ್‌ ಹಣ ಪಾವತಿ: ಸಂಜೀವ್‌ ಕಿಶೋರ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 4:36 IST
Last Updated 4 ಜನವರಿ 2022, 4:36 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್ ಅವರಿಗೆ ಎಸ್‌ಬಿಐ ಹುಬ್ಬಳ್ಳಿ ವಲಯದ ಉಪಪ್ರಧಾನ ವ್ಯವಸ್ಥಾಪಕ ಎಸ್‌. ರಾಜೇಂದ್ರ ಅವರು ಪಿಒಎಸ್‌ ಯಂತ್ರ ಹಸ್ತಾಂತರಿಸಿದರು
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್ ಅವರಿಗೆ ಎಸ್‌ಬಿಐ ಹುಬ್ಬಳ್ಳಿ ವಲಯದ ಉಪಪ್ರಧಾನ ವ್ಯವಸ್ಥಾಪಕ ಎಸ್‌. ರಾಜೇಂದ್ರ ಅವರು ಪಿಒಎಸ್‌ ಯಂತ್ರ ಹಸ್ತಾಂತರಿಸಿದರು   

ಹುಬ್ಬಳ್ಳಿ: ರೈಲುಗಳಲ್ಲಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವುದನ್ನು ಪ್ರೋತ್ಸಾಹಿಸಲು ನೈರುತ್ಯ ರೈಲ್ವೆಯು ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ 120 ಪಿಒಎಸ್‌(ಪಬ್ಲಿಕ್‌ ಆಪರೇಟಿವ್‌ ಸರ್ವಿಸ್‌) ಯಂತ್ರಗಳ ಅಳವಡಿಕೆ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಹೇಳಿದರು.

ನಗರದ ಕೇಶ್ವಾಪುರದ ರೈಲ್ವೆ ಮುಖ್ಯ ಶಾಖೆಯಲ್ಲಿ ಸೋಮವಾರ ನಡೆದ ಶಾಖೆಯ ಶತಮಾನೋತ್ಸವ ಸಮಾರಂಭದಲ್ಲಿ, ಎಸ್‌ಬಿಐ ಹುಬ್ಬಳ್ಳಿ ವಲಯದ ಉಪಪ್ರಧಾನ ವ್ಯವಸ್ಥಾಪಕ ಎಸ್‌. ರಾಜೇಂದ್ರ ಅವರಿಂದ ಪಿಒಎಸ್‌ ಯಂತ್ರ ಸ್ವೀಕರಿಸಿ ಅವರು ಮಾತನಾಡಿದರು.

ಡಿಜಿಟಲ್ ಇಂಡಿಯಾ ಮುನ್ನಡೆಸುವಲ್ಲಿ ಡಿಜಿಟಲ್ ಹಣ ಪಾವತಿ ವಿಧಾನ ಸಹಕಾರಿಯಾಗಲಿದೆ. ನೈರುತ್ಯ ವಲಯದ ಮೂರು ವಿಭಾಗಗಳ ಟಿಕೆಟ್ ಪರೀಕ್ಷಕರಿಗೆ ಯಂತ್ರಗಳನ್ನು ನೀಡಲಾಗುವುದು. ಕೋವಿಡ್ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಸ್ಪರ್ಶ ಹಾಗೂ ನಗದು ರಹಿತ ಹಣ ಪಾವತಿಗೆ ಹಾಗೂ ಪಾರದರ್ಶಕ ವಹಿವಾಟಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಈಗಾಗಲೇ 330 ಪಿಒಎಸ್‌ ಯಂತ್ರಗಳನ್ನು ನೈಋತ್ಯ ರೈಲ್ವೆಯ ಯುಟಿಎಸ್, ಟಿಕೆಟ್‌ ಕಾಯ್ದಿರಿಸುವ ಕೌಂಟರ್‌ ಹಾಗೂ ಪಾರ್ಸಲ್ ಕಚೇರಿಗಳಲ್ಲಿ ಬಳಸಲಾಗುತ್ತಿದೆ. ಇದೀಗ ಪ್ರಥಮ ಬಾರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನೀಡಿರುವ ಪಿಒಎಸ್‌ ಯಂತ್ರಗಳನ್ನು ಟಿಕೆಟ್ ಪರೀಕ್ಷಕರಿಗೆ ನೀಡಲಾಗುವುದು ಎಂದು ತಿಳಿಸಿದರು.

ರೇಲ್ವೆ ಅಧಿಕಾರಿಗಳಾದ ಶ್ರೀನಿವಾಸರಾವ್, ಅರವಿಂದಕುಮಾರ್ ರಜಕ್, ಆರ್.ಎಸ್. ಸಂಗನಾಳ ಇದ್ದರು.

ಪಿಒಎಸ್‌ ಪ್ರಯೋಜನೆ: ಪ್ರಯಾಣಿಕರಿಗೆ ಹಣ ಪಾವತಿ ಮಾಡುವ ವಿವಿಧ ವಿಧಾನಗಳ ಆಯ್ಕೆ ಒದಗಿಸುತ್ತದೆ. ಪ್ರಯಾಣಿಕರ ಬಳಿ ನಗದು ಹಣವಿಲ್ಲದಿದ್ದಾಗ ಟಿಕೆಟ್ ಪರೀಕ್ಷಕರು ದಂಡ ಅಥವಾ ಪ್ರಯಾಣಿಕರು ತೆರಬೇಕಾದ ಬಾಕಿ ಹಣವನ್ನು ಡಿಜಿಟಲ್ ಮೂಲಕ ಪಾವತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.