ADVERTISEMENT

‘ಓದು ಅಂಕ ಗಳಿಕೆಗೆ ಸೀಮಿತವಾಗದಿರಲಿ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 2:39 IST
Last Updated 18 ಮಾರ್ಚ್ 2022, 2:39 IST
ಅಳ್ನಾವರದ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವೈದ್ಯ ಸುನಿಲ್ ಕರಿ ಮಾತನಾಡಿದರು.
ಅಳ್ನಾವರದ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವೈದ್ಯ ಸುನಿಲ್ ಕರಿ ಮಾತನಾಡಿದರು.   

ಅಳ್ನಾವರ: ಪ್ರಸ್ತುತ ಶೈಕ್ಷಣಿಕ ಹಾದಿ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿದೆ. ಅಂಕಗಳ ಜೊತೆಗೆ ಮಾನವೀಯ ಮೌಲ್ಯ, ಕೌಲಾಭಿವೃದ್ಧಿ, ಶಿಸ್ತು ಹಾಗೂ ಕಠಿಣ ಶ್ರಮವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹುಬ್ಬಳ್ಳಿಯ ಮಂದಾಕಿನಿ ಮೆಮೊರಿಯಲ್ ಆಸ್ಪತ್ರೆಯ ಸಂಸ್ಥಾಪಕ ಡಾ. ಸುನಿಲ್ ಕರಿ ಹೇಳಿದರು.

ಇಲ್ಲಿನ ಅಳ್ನಾವರ ಶಿಕ್ಷಣ ಸಂಸ್ಥೆಯ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರಾಮರಂಗಾಣಿ ಅವರಿಗೆ ಆದರ್ಶ ವಿದ್ಯಾರ್ಥಿ ಹಾಗೂ ತೇಜಸ್ವಿನಿ ಪಾಟೀಲ ಅವರಿಗೆ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ಮತ್ತು ಪಾರಿತೋಷಕ ನೀಡಿ ಮಾತನಾಡಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಹಿರೇಮಠ ‘ಶಿಸ್ತು, ಅಧ್ಯಯನ, ಕ್ರೀಡೆ, ನಡುವಳಿಕೆ ಮುಂತಾದ ವಿಷಯಗಳನ್ನು ಪರಿಗಣಿಸಿ ಈ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಲಾಗುತ್ತಿದೆ. ಶಾಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ಅಳವಡಿಸಲಾಗಿದೆ’ ಎಂದರು.

ADVERTISEMENT

ಮುಖ್ಯ ಶಿಕ್ಷಕಿ ಶೋಭಾ ನಾಯಕ, ಆಡಳಿತ ಮಂಡಳಿಯ ಎಂ.ವೈ. ರಾಂದೇವಾಡಿ, ಅಮೃತ ಪಟೇಲ, ಕಾರ್ಯದರ್ಶಿ ವಿನಾಯಕ ಹಿರೇಮಠ, ಕೇಶವ ಪಟೇಲ, ಚಂದು ಪಟೇಲ, ದೇವಜಿ ಪಟೇಲ ಇದ್ದರು. ರೇಷ್ಮಾ ಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಷೇಕ ಗಾಡಗೀಲ್ ಸ್ವಾಗತಿಸಿದರು. ಸುಧಾ ಜೋಶಿ ಮಾತನಾಡಿದರು. ಸಿ. ಶಫಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.