ADVERTISEMENT

ಹುಬ್ಬಳ್ಳಿ | ಗಾಂಜಾ ಮಾರಾಟ: ₹1.06 ಕೋಟಿ ಮೌಲ್ಯದ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 23:49 IST
Last Updated 31 ಜುಲೈ 2024, 23:49 IST
   

ಹುಬ್ಬಳ್ಳಿ: ನಗರದಲ್ಲಿ ಗಾಂಜಾ ಮಾರಲು ಯತ್ನಿಸಿದ್ದ ರಾಜಸ್ಥಾನ ಮೂಲದ ಓಂಪ್ರಕಾಶ ಬಾರಮೇರ ಎಂಬುವನನ್ನು  ಬಂಧಿಸಿರುವ ಶಹರ ಠಾಣೆ ಪೊಲೀಸರು, ₹85 ಸಾವಿರ ಮೌಲ್ಯದ ಗಾಂಜಾ, ₹96.50 ಲಕ್ಷ ನಗದು, ಕಾರು ಸೇರಿ ಒಟ್ಟು ₹ 1.06 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಸಂಜೆ ಓಂಪ್ರಕಾಶ ಬಾರಮೇರ ಗಾಂಜಾ ಮಾರುವಾಗ, ಕಾರ್ಯಾಚರಣೆ ನಡೆಸಿದೆವು. ಆತ 6 ತಿಂಗಳಿನಿಂದ ಹುಬ್ಬಳ್ಳಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ. ಆತನಿಂದ ₹96.50 ಲಕ್ಷ ನಗದು, 50 ಸಾವಿರ ಮೌಲ್ಯದ ಐಪೋನ್, ವಿವಿಧ ಬ್ಯಾಂಕುಗಳ 30 ಎಟಿಎಂ ಕಾರ್ಡ್‌ಗಳು, 36 ಚೆಕ್‌, 4 ಪಾಸ್‌ಬುಕ್‌ ಮತ್ತು 9 ಪಾನ್‌ಕಾರ್ಡ್‌, 7 ರಬ್ಬರ್ ಸ್ಟಾಂಪ್‌, 6 ಸ್ವಾಂಪಿಂಗ್ ಯಂತ್ರ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT