ADVERTISEMENT

ಪ್ರತಿ ಮನುಷ್ಯನಲ್ಲೂ ಶ್ರೇಷ್ಠತೆ ಅಡಕ: ಪ್ರೊ.ಶಿವಪ್ರಸಾದ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:29 IST
Last Updated 31 ಜುಲೈ 2024, 15:29 IST
ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಬುಧವಾರ ಏರ್ಪಡಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಧಾರವಾಡ ಐಐಟಿ ಡೀನ್‌ ಪ್ರೊ.ಶಿವಪ್ರಸಾದ ಸುನ್ನದಮಠ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಬುಧವಾರ ಏರ್ಪಡಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಧಾರವಾಡ ಐಐಟಿ ಡೀನ್‌ ಪ್ರೊ.ಶಿವಪ್ರಸಾದ ಸುನ್ನದಮಠ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಪ್ರತಿ ಮನುಷ್ಯನಲ್ಲೂ ಶ್ರೇಷ್ಠತೆ ಅಡಕವಾಗಿದೆ. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಪರಿಶ್ರಮ ಪಡಬೇಕು’ ಎಂದು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಡೀನ್‌ ಪ್ರೊ.ಶಿವಪ್ರಸಾದ ಸುನ್ನದಮಠ ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ತನ್ನ ಸಂಯೋಜಿತ ಎಲ್ಲ ಕಾನೂನು ಮಹಾವಿದ್ಯಾಲಯಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಬುಧವಾರ ಏರ್ಪಡಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ಪರಿಣಾಮ ಕಾನೂನು ಕ್ಷೇತ್ರದಲ್ಲೂ ಆಗಿದ್ದು, ವೃತ್ತಿಯಲ್ಲಿ ವಿಫುಲವಾದ ಅವಕಾಶ ಮಾಡಿಕೊಟ್ಟಿದೆ. ಯಶಸ್ವಿ ವೃತ್ತಿಜೀವನ ನಡೆಸುವುದಕ್ಕೆ ಮೂಲವಾಗಿ ಉತ್ಸಾಹದ ಅಗತ್ಯವಿದೆ. ಹಾಗೆಯೇ ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ಕಡಿಮೆ ಮಾಡುವುದಕ್ಕೆ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ. ಯಾವುದೇ ತಪ್ಪು ಮಾಡಿದಾಗ ಅದರಿಂದ ಪಾಠ ಕಲಿತು ಜೀವನವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿದರು. ಧಾರವಾಡದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಗಂಗಾಧರ ಜೆ.ಎಂ. ಮಾತನಾಡಿದರು.

ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವ, ಎಚ್.ವಿ.ಬೆಳಗಲಿ, ವಿಶ್ವವಿದ್ಯಾಲಯದ ಕುಲಸಚಿವ ಅನುರಾಧಾ ವಸ್ತ್ರದ, ಕುಲಸಚಿವ (ಮೌಲ್ಯಮಾಪನ ವಿಭಾಗ) ಪ್ರೊ.ರತ್ನಾ ಆರ್. ಭರಮಗೌಡರ, ಅನು ಪ್ರಸನ್ನನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.