ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾತನಾಡಿದರು
ಹುಬ್ಬಳ್ಳಿ: ‘ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ದೇಶವು ಅಭಿವೃದ್ಧಿ ಮತ್ತು ಸ್ವಾವಲಂಬನೆಯತ್ತ ವೇಗವಾಗಿ ಸಾಗುತ್ತಿದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ’ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಮೂರನೇ ಅವಧಿಯ ಮೊದಲ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಹಿಂದಿನ ಯುಪಿಎ ಸರ್ಕಾರದಲ್ಲಿ ಸ್ಪಷ್ಟವಾದ ನೀತಿಗಳಿರಲಿಲ್ಲ. ಬಲವಾದ ನಾಯಕತ್ವ ಇರಲಿಲ್ಲ. ಹಗರಣಗಳಿಂದ ತುಂಬಿತ್ತು. ನಮ್ಮ ಸರ್ಕಾರ ಆಡಳಿತಕ್ಕೆ ಬಂದು 11 ವರ್ಷಗಳನ್ನು ಪೂರೈಸಿದೆ. ಮೋದಿ ಅವರ ನೇತೃತ್ವದಲ್ಲಿ ನಾವು ಸುಸ್ಥಿತ ಆಡಳಿತ ನೀಡುತ್ತಿದ್ದು, ದೇಶದ ಆರ್ಥಿಕತೆ ಮತ್ತು ಭದ್ರತೆಗೆ ಆದ್ಯತೆ ನೀಡಲಾಗಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾವಲಂಬನೆಯನ್ನೂ ಸಾಧಿಸಿದ್ದೇವೆ’ ಎಂದರು.
‘ಪಿಎಂ ಸ್ವನಿಧಿ ಯೋಜನೆ ಜಾರಿಯಿಂದಾಗಿ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ಥಿತಿಯು ಉತ್ತಮವಾಗಿದೆ. ಸ್ಟಾರ್ಟ್‌ಅಪ್‌ಗಳು ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ದೇಶದ 160 ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ’ ಎಂದು ಹೇಳಿದರು.
ರೈಲ್ವೆ ಅಭಿವೃದ್ಧಿಗೂ ಆದ್ಯತೆ: 2025–26ನೇ ಹಣಕಾಸು ವರ್ಷದಲ್ಲಿ ದೇಶದಾದ್ಯಂತ ರೈಲ್ವೆ ಅಭಿವೃದ್ಧಿಗೆ ₹2,65,200 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇದು 2009–14ರ ಅವಧಿಯಲ್ಲಿ ಹಂಚಿಕೆಯಾಗಿದ್ದಕ್ಕಿಂತ ಸುಮಾರು ಆರು ಪಟ್ಟು ಹೆಚ್ಚಿನದ್ದಾಗಿದೆ’ ಎಂದರು.
‘ರಾಜ್ಯದ ರೈಲು ಸಂಪರ್ಕ ಮತ್ತು ಮೂಲಸೌಕರ್ಯ ಸುಧಾರಣೆಗಾಗಿ ಆದ್ಯತೆ ನೀಡಲಾಗಿದ್ದು, 2014ರಿಂದ ರಾಜ್ಯದಲ್ಲಿ ಒಟ್ಟು 1,652 ಕಿಮೀ., ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸುವ ಮೂಲಕ ರಾಜ್ಯದಾದ್ಯಂತ ರೈಲ್ವೆ ಸಂಪರ್ಕವನ್ನು ಇನ್ನಷ್ಟೂ ಬಲಪಡಿಸಲಾಗಿದೆ’ ಎಂದರು.
‘3,233 ಕಿಮೀ., ರೈಲು ಮಾರ್ಗಗಳನ್ನು ವಿದ್ಯುದ್ಧೀಕರಣ ಮಾ+ಡಲಾಗಿದೆ. ಇದು ರಾಜ್ಯದ ರೈಲ್ವೆ ಜಾಲದ ಶೇ 96 ಒಳಗೊಂಡಿದ್ದು, ಪರಿಸರ ಸ್ನೇಹಿ, ವೇಗದ ಪ್ರಯಾಣವಾಗಿದೆ. ಇದರೊಂದಿಗೆ 3,840 ಕಿಮೀ., ವ್ಯಾಪ್ತಿಯ 31 ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 61 ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ರಾಜ್ಯದ 12 ಜಿಲ್ಲೆಗಳ ನಡುವೆ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಕಲ್ಪಿಸಲಾಗಿದೆ’ ಎಂದರು.
‘ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು, ನೈರುತ್ಯ ರೈಲ್ವೆಯಲ್ಲಿ ಸುಧಾರಿತ ಕವಚ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಮೂರು ವಿಭಾಗಗಳಲ್ಲಿ ಕವಚ ಸಂಬಂಧಿತ ಕಾರ್ಯಗಳನ್ನು ಸ್ಥಾಪಿಸಲು ಮತ್ತು ಕಾರ್ಯಗತಗೊಳಿಸಲು ಇ-ಟೆಂಡರ್ ನೀಡಲಾಗಿದೆ. ರಸ್ತೆ– ರೈಲ್ವೆ ಸುರಕ್ಷತೆಗಾಗಿ ಅಗತ್ಯವಿರುವೆಡೆ ಮೇಲ್ಸೇತುವೆ, ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. 601 ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ಮುಚ್ಚುವ ಮೂಲಕ ಗೇಟ್‌ನಲ್ಲಿ ಆಗುವ ವಿಳಂಬವನ್ನು ನಿವಾರಿಸಲಾಗಿದೆ’ ಎಂದರು.
ಜೋಡಿ ಮಾರ್ಗ, ಹೊಸ ಲೈನ್ ಯೋಜನೆ: ‘ಗದಗ– ಹೊಟಗಿ, ಹುಬ್ಬಳ್ಳಿ– ಚಿಕ್ಕಜಾಜೂರು, ಅರಸೀಕೆರೆ– ತುಮಕೂರು ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲು ನೂತನ ಜೋಡಿಮಾರ್ಗ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ‘ ಎಂದರು.
‘ಗದಗ– ವಾಡಿ, ಬಾಗಲಕೋಟೆ– ಕುಡಚಿ, ಬೆಳಗಾವಿ– ಧಾರವಾಡ (ಕಿತ್ತೂರು ಮೂಲಕ), ಹುಬ್ಬಳ್ಳಿ– ಆಂಕೋಲಾ ಸೇರಿದಂತೆ ಕೆಲ ನಗರಗಳನ್ನು ಸಂಪರ್ಕಿಸಲು ಹೊಸ ಲೈನ್ ಯೋಜನೆಗಳ ಜಾರಿಗೂ ಅಗತ್ಯ ಅನುದಾನ ಹಂಚಿಕೆ ಮಾಡಲಾಗಿದೆ‘ ಎಂದು ಮಾಹಿತಿ ನೀಡಿದರು.
ಮುಖಂಡರಾದ ತಿಪ್ಪಣ್ಣ ಮಜ್ಜಿಗೆ, ಲಿಂಗಣ್ಣ ಸುತಗಟ್ಟಿ, ಎಂ.ಆರ್.ಪಾಟೀಲ, ಲಿಂಗರಾಜು ಪಾಟೀಲ, ಕ್ರಾಂತಿ ಕಿರಣ, ಸೀಮಾ ಮಸೂತಿ, ಅಮೃತ ದೇಸಾಯಿ ಹಾಜರಿದ್ದರು.
ಬೆಂಗಳೂರಿಗೆ ತುಮಕೂರು ಸೇರ್ಪಡೆ: ಸೋಮಣ್ಣ ಆಕ್ಷೇಪ
ಹುಬ್ಬಳ್ಳಿ: ‘ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣದ ಮಾಡಿದ ರೀತಿ ತುಮಕೂರನ್ನು ಬೆಂಗಳೂರಿನಲ್ಲಿ ಸೇರಿಸುವ ಚಿಂತನೆ ಒಪ್ಪಲಾಗದು. ತುಮಕೂರಿಗೆ ಅದರದ್ದೇ ಆದ ಇತಿಹಾಸವಿದೆ. ಜನರನ್ನು ಅನಗತ್ಯವಾಗಿ ದಾರಿ ತಪ್ಪಿಸುವ ಕೆಲಸ ನಡೆದಿದೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಒಗ್ಗಟ್ಟು ಇಲ್ಲ ಎಂಬುದು ರಾಜ್ಯದ ಆಡಳಿತ ವೈಖರಿಯಲ್ಲಿ ಗೊತ್ತಾಗುತ್ತಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಕ್ಕೆ ಶೂನ್ಯ ಅಂಕ ಕೊಡುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ನೋಡಿದಂತಹ ಸಿದ್ದರಾಮಯ್ಯ ಈಗಿಲ್ಲ. ಬದಲಾಗಿದ್ದಾರೆ. ಅವರೇ ಮುಂದಿನ ದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.