ADVERTISEMENT

ರಾಜಶೇಖರ ಮೆಣಸಿನಕಾಯಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 13:57 IST
Last Updated 20 ಸೆಪ್ಟೆಂಬರ್ 2020, 13:57 IST
ಹುಬ್ಬಳ್ಳಿಯಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿಕಾಯಿ ಅವರನ್ನು ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸನ್ಮಾನಿಸಿದರು
ಹುಬ್ಬಳ್ಳಿಯಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿಕಾಯಿ ಅವರನ್ನು ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸನ್ಮಾನಿಸಿದರು   

ಹುಬ್ಬಳ್ಳಿ: ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಯುವ ಮುಖಂಡ ರಾಜಶೇಖರ ಮೆಣಸಿಕಾಯಿ ನೇಮಕವಾದ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸನ್ಮಾನಿಸಿದರು.

ರಾಜಶೇಖರ ಮೆಣಸಿನಕಾಯಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ‘ರಾಜಶೇಖರ ನೇರ ನಡೆ ನುಡಿ ಹಾಗೂ ಪ್ರಾಮಾಣಿಕತೆಗೆ ಹೆಸರಾದವರು. ಅವರು ಒಂದು ಸಮಾಜದ ನೇತೃತ್ವ ವಹಿಸುವ ಜೊತೆಗೆ ಸರ್ವಧರ್ಮಗಳನ್ನು ಸಮನ್ವಯತೆಯಿಂದ ಕಾಪಾಡಿಕೊಂಡು ಹೋಗುತ್ತಾರೆ’ ಎಂದರು.

‘ಕಳೆದ 13 ವರ್ಷಗಳಿಂದ ಸಮಾಜದ ಸಂಘಟನೆ ಮಾಡಲು ಮೆಣಸಿನಕಾಯಿ ಸಾಕಷ್ಟು ಶ್ರಮಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿಸಿದರು.

ADVERTISEMENT

ಲಿಂಗಾಯತ ಸಮಾಜದ ಮುಖಂಡರಾದ ಶರಣಪ್ಪ ಕೊಟಗಿ, ಶಂಕರಣ್ಣ ನೇಗಿನಹಾಳ, ಸುರೇಶ ಸವಣೂರು, ಎಂ.ಪಿ. ಶಿವಕುಮಾರ್, ಪ್ರಶಾಂತ್ ಹಾವಣಗಿ, ಕಾಳು ಸಿಂಗ್ ಚವ್ಹಾಣ, ಗಿರೀಶ ಸುಂಕದ, ಸೂರ್ಯಕಾಂತ ಘೋಡಕೆ, ವೀರಣ್ಣ ನಿರಲಗಿ, ಗುರು ಕುಂದನಹಳ್ಳಿ , ರವಿ ಹೊಸೂರು, ಮಲ್ಲಿಕಾರ್ಜುನ ಹಿರೇಗೌಡರ, ಸಿ.ಎನ್.ಹಿರೇಮಠ, ಪ್ರಕಾಶ ಶೆಟ್ಟಿ, ಅಪ್ಪಣ್ಣ ಕಮ್ಮಾರ, ನಂದಕುಮಾರ ಪಾಟೀಲ, ಕುಮಾರ ಕುಂದನಹಳ್ಳಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.