ADVERTISEMENT

ಸಿದ್ದರಾಮಯ್ಯರ ಸರ್ಕಾರದಲ್ಲಿ 1 ಲಕ್ಷ ಹುದ್ದೆಗಳ ಭರ್ತಿ

ಕುಬೇರಪ್ಪ ಪರ ಅಂಜುಮನ್‌ ಇಸ್ಲಾಂ ಸಂಸ್ಥೆಯಲ್ಲಿ ಪ್ರಚಾರ ಸಭೆ: ಅಬ್ಬಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:39 IST
Last Updated 25 ಅಕ್ಟೋಬರ್ 2020, 7:39 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಅಭ್ಯರ್ಥಿಯ ಪ್ರಚಾರ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಅಭ್ಯರ್ಥಿಯ ಪ್ರಚಾರ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು   

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆದ ಸುಧಾರಣೆಗಳಿಂದಾಗಿ1 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಗಳು ನಡೆದವು. ಇದು ಕಾಂಗ್ರೆಸ್‌ನ ಹೆಮ್ಮೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ನೆಹರೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಎಂ.ಆರ್. ಕುಬೇರಪ್ಪ ಪರ ಮತಯಾಚಿಸಿ ಮಾತನಾಡಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ7,905 ಪ್ರಾಥಮಿಕ, 1,689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ, 10 ಸಾವಿರ ಪದವೀಧರ ವಿಷಯವಾರು ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕಾತಿ ನಡೆದಿದೆ.ನೇಮಕಾತಿ ಮಾತ್ರವಲ್ಲದೇ ವೇತನ ಹೆಚ್ಚಳ ವಿಚಾರದಲ್ಲೂ ನಮ್ಮ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಆದ್ದರಿಂದ ಈ ಸಲದ ಚುನಾವಣೆಯಲ್ಲಿ ಕುಬೇರಪ್ಪ ಅವರನ್ನು ಬೆಂಬಲಿಸಬೇಕು’ ಎಂದು ಕೋರಿದರು.

ADVERTISEMENT

ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಯೂಸೂಫ್ ಸವಣೂರು ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಕೇವಲಭರವಸೆ ನೀಡಿ ಮರಳು ಮಾಡುವ ಪಕ್ಷಗಳನ್ನು ತಿರಸ್ಕರಿಸಿ, ನಿಜವಾಗಿಯೂ ಪದವೀಧರರ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷವನ್ನುಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಹುಬ್ಬಳ್ಳಿ ಧಾರವಾಡಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷಅಲ್ತಾಫ್ ಹಳ್ಳೂರು, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು, ಪದಾಧಿಕಾರಿಗಳಾದ ಬಶೀರ್ ಹಳ್ಳೂರು, ಅಬ್ದುಲ್ ಮುನಾಫ್ ದೇವಗಿರಿ, ಮಹ್ಮದ್ ಖಾನ್ ಪಠಾಣ್, ಹಜ್ಜುಖಾನ್ ಧಾರವಾಡ, ಮೆಹಮೂದ್ ಕೋಳೂರು, ಶಬ್ಬೀರ್ ಚುಹೇ, ಸಲೀಂ ಸುಂಡಕೆ, ಇಮಾಂ ಹುಸೇನ್ ಮಡಕಿ, ಸಂಸ್ಥೆಯ ಪ್ರಾಚಾರ್ಯರಾದಡಾ. ಎಸ್.ಎಸ್. ಮೌಲ್ವಿ, ಫಿರೋಜ್, ಶಿವಳ್ಳಿ, ಅನ್ಸಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.