ADVERTISEMENT

ಹುಬ್ಬಳ್ಳಿಯಿಂದ ಚೆನ್ನೈಗೆ ವಿಮಾನ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 8:19 IST
Last Updated 2 ಸೆಪ್ಟೆಂಬರ್ 2019, 8:19 IST
ಇಂಡಿಗೊ ವಿಮಾನ
ಇಂಡಿಗೊ ವಿಮಾನ   

ಹುಬ್ಬಳ್ಳಿ:ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಿಂದ ಚೆನ್ನೈ ಮತ್ತು ಅಹಮದಾಬಾದ್‌ಗೆ ಸ್ಥಗಿತಗೊಂಡಿದ್ದ ಇಂಡಿಗೊದ ವಿಮಾನ ಯಾನ ಸೌಲಭ್ಯ ಭಾನುವಾರ ಪುನರಾರಂಭವಾಗಿದೆ.

ಇಂಡಿಗೊ ವಿಮಾನ ನಿತ್ಯ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3.20ಕ್ಕೆ ಚೆನ್ನೈ ತಲುಪಲಿದೆ. ಚೆನ್ನೈನಿಂದ 3.50ಕ್ಕೆ ಹೊರಟು 5.15ಕ್ಕೆ ಹುಬ್ಬಳ್ಳಿಗೆ ಬರಲಿದೆ.

ಇನ್ನೊಂದು ವಿಮಾನನಿತ್ಯ ಬೆಳಿಗ್ಗೆ 9.45ಕ್ಕೆ ಹುಬ್ಬಳ್ಳಿಯಿಂದ ಹೊರಟು 11.20ಕ್ಕೆ ಅಹಮದಾಬಾದ್‌ ಮುಟ್ಟಲಿದೆ. 11.50ಕ್ಕೆ ಅಹಮದಾಬಾದ್‌ನಿಂದ ಹೊರಟು ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿಗೆ ಬರಲಿದೆ.

ADVERTISEMENT

ಏರ್‌ ಇಂಡಿಯಾ ಸಂಸ್ಥೆಯ ಎರಡು ವಿಮಾನಗಳು ನಿತ್ಯ ಹುಬ್ಬಳ್ಳಿಯಿಂದ ಚೆನ್ನೈ ಮತ್ತು ಅಹಮದಾಬಾದ್‌ ಸಂಚರಿಸುತ್ತಿವೆ. ಚೆನ್ನೈನಿಂದ ಒಂದು ಮತ್ತು ಅಹಮದಾಬಾದ್‌ನಿಂದ ಎರಡು ವಿಮಾನಗಳು ನಿತ್ಯ ವಾಣಿಜ್ಯ ನಗರಿಗೆ ಬರುತ್ತವೆ.

‘ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಹುಬ್ಬಳ್ಳಿಯಿಂದಸ್ಥಗಿತಗೊಂಡಿದ್ದ ಇಂಡಿಗೊದ ಚೆನ್ನೈ ಮತ್ತು ಅಹಮದಾಬಾದ್‌ ನಡುವಿನವಿಮಾನ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಸ್ಪಂದನೆ ಕೂಡ ಉತ್ತಮವಾಗಿದೆ’ ಎಂದು ಇಲ್ಲಿನವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಣಿಜ್ಯ ನಗರಿಯಾದ ಕಾರಣ ಬೇರೆ ನಗರಗಳ ಜೊತೆ ಸಂಪರ್ಕ ಬೆಸೆಯಲು ಹೊಸ ವಿಮಾನಯಾನಕ್ಕೆನಿರಂತರವಾಗಿ ಪ್ರಯತ್ನ ನಡೆಸಿದ್ದೇವೆ. ಮುಖ್ಯವಾಗಿ ಪುಣೆ, ಮಂಗಳೂರು ಮತ್ತು ಹೈದರಾಬಾದ್‌ಗೆ ವಿಮಾನಯಾನ ಕಲ್ಪಿಸುವ ಅಗತ್ಯವಿದೆ ಎಂದು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಹೈದರಾಬಾದ್‌ಗೆ ಇಲ್ಲಿಂದ ತೆರಳುತ್ತಿದ್ದ ಸ್ಪೆಸ್‌ ಜೆಟ್‌ ಈಗ ಸ್ಥಗಿತಗೊಂಡಿದೆ. ಆದ್ದರಿಂದ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಅಗತ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.