ADVERTISEMENT

ಉಪ್ಪಿನಬೆಟಗೇರಿ: ಗಣೇಶ ಮೂರ್ತಿ ವಿಸರ್ಜನೆಗೆ ಸಿದ್ದತೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:07 IST
Last Updated 2 ಸೆಪ್ಟೆಂಬರ್ 2025, 4:07 IST
ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಬೈಲಹೊಂಗಲ ರಸ್ತೆಯ ತುಪ್ಪರಿಹಳ್ಳದ ಸೇತುವೆ ಬಳಿ ಜೆಸಿಬಿಯಿಂದ ಹೂಳು ತೆಗೆಯಲಾಯಿತು
ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಬೈಲಹೊಂಗಲ ರಸ್ತೆಯ ತುಪ್ಪರಿಹಳ್ಳದ ಸೇತುವೆ ಬಳಿ ಜೆಸಿಬಿಯಿಂದ ಹೂಳು ತೆಗೆಯಲಾಯಿತು   

ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಯುವಕ ಮಂಡಳದಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಸೆಪ್ಟೆಂಬರ್‌ 2, 4 ಹಾಗೂ 6ರಂದು ನಡೆಯಲಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಕೆಲವು ಮನೆ ಹಾಗೂ ಶಾಲೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದ್ದು, 7, 9 ಹಾಗೂ 11ನೇ ದಿನದ ವಿಸರ್ಜನೆ ಹಂತ, ಹಂತವಾಗಿ ನಡೆಯಲಿದೆ.

ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಬೈಲಹೊಂಗಲ ರಸ್ತೆಯ ತುಪ್ಪರಿಹಳ್ಳದ ಸೇತುವೆ ಮುಂಭಾಗದಲ್ಲಿ 10 ಅಡಿ ಆಳ, 50ಅಡಿ ಅಗಲ ಮತ್ತು ಉದ್ದದ ಗುಂಡಿ ತೆಗೆಯಲಾಗಿದೆ.

ADVERTISEMENT

ರಾತ್ರಿ ವೇಳೆ ವಿಸರ್ಜನೆ ಕಾರ್ಯ ನಡೆಯುವುದರಿಂದ ಆ ಸ್ಥಳದಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಹಳೇ ಬಸ್ ನಿಲ್ಧಾಣದಿಂದ ತುಪ್ಪರಿ ಹಳ್ಳದ ಸೇತುವೆ ವರೆಗಿನ ರಸ್ತೆಯ ಅಕ್ಕ-ಪಕ್ಕದಲ್ಲಿ ಸಂಗ್ರಹವಾದ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.  

ಗರಗ ಪೊಲೀಸ್‌ ಠಾಣೆ ವತಿಯಿಂದ ಈಗಾಗಲೇ ಶಾಂತಿ ಸಭೆ ಮತ್ತು ಪ್ರಮುಖ ಬೀದಿಯಲ್ಲಿ ಎರಡು ಭಾರಿ ಪಥಸಂಚಲನ  ನಡೆಸಿ ಜಾಗೃತಿ ಮೂಡಿಸಲಾಗಿದೆ.

Quote - ಶಾಂತಿ ಸೌಹಾರ್ದದಿಂದ ಎಲ್ಲ ಯುವಕ ಮಂಡಳದವರು ಮೆರವಣಿಗೆ ಮೂಲಕ  ರಾತ್ರಿ 10 ಗಂಟೆಯೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು ಸಮೀರ ಮುಲ್ಲಾ ಸಿಪಿಐ

Quote - ಗ್ರಾಮದಲ್ಲಿ 19 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ವಿಸರ್ಜನೆಗಾಗಿ ಗ್ರಾಮ ಪಂಚಾಯಿತಿ ತುಪ್ಪರಿ ಹಳ್ಳದ ಸೇತುವೆ ಬಳಿ ಸಕಲ ಸಿದ್ದತೆ ಮಾಡಿದೆ ಬಶೀರ ಅಹ್ಮದ ಮಾಳಗಿಮನಿ ಅಧ್ಯಕ್ಷ  ಗ್ರಾಮ ಪಂಚಾಯಿತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.