ಮಹಾಲಿಂಗಪುರ: ಘಟಪ್ರಭಾ ನದಿ ಪ್ರವಾಹ ಬುಧವಾರ ಸ್ವಲ್ಪ ಇಳಿಮುಖವಾಗಿದ್ದು, ಪ್ರವಾಹ ಭಾದಿತ ನಂದಗಾಂವ ಹಾಗೂ ಢವಳೇಶ್ವರ ಗ್ರಾಮದ ನಿರಾಶ್ರಿತರಲ್ಲಿ ಆತಂಕ ದೂರವಾಗಿ ಆಶಾಭಾವನೆ ಮೂಡಿದೆ.
ಹಿಡಕಲ್ ಜಲಾಶಯ ಮತ್ತು ಹಿರಣ್ಯಕೇಶಿ ನದಿ ಎರಡು ಸೇರಿ ಧುಪದಾಳ ಜಲಾಶಯ ಮಾರ್ಗವಾಗಿ 38,070 ಕ್ಯುಸೆಕ್, ಮಾರ್ಕಂಡೇಯ ಜಲಾಶಯ ಹಾಗೂ ಬಳ್ಳಾರಿ ನಾಲಾದಿಂದ 2,000 ಕ್ಯುಸೆಕ್ ಸೇರಿ ಒಟ್ಟು 40,070 ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ.
ನಂದಗಾಂವ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿ ಜಲಾವೃತಗೊಂಡ ತೋಟದ ಮನೆಗಳನ್ನು ಗ್ರಾಮ ಲೆಕ್ಕಾಧಿಕಾರಿ ಎಸ್.ಡಿ.ಜಮಾದಾರ, ಪಿಡಿಒ ಪಿ.ಪಿ.ರಾವಳ ಅವರು ಬುಧವಾರ ಸಮೀಕ್ಷೆ ನಡೆಸಿದರು.
ಪ್ರವಾಹ ಇಳಿಮುಖವಾಗಿದ್ದರೂ ಹಳೇ ನಂದಗಾಂವ ಗ್ರಾಮ ನಡುಗಡ್ಡೆಯಾಗಿ ಮುಂದುವರಿದಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುವಾರ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.