ADVERTISEMENT

ಹುಬ್ಬಳ್ಳಿ| ಜಾಗತೀಕರಣದಿಂದಾಗಿ ಬದುಕಿನ ಮೌಲ್ಯ ಕುಸಿತ: ಪ್ರೊ. ಐ.ಜಿ. ಸನದಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:30 IST
Last Updated 14 ಅಕ್ಟೋಬರ್ 2025, 4:30 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸನ್ಮಾನಿಸಲಾಯಿತು
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ‘ಜಾಗತೀಕರಣದಿಂದಾಗಿ ಬದುಕಿನ ಮೌಲ್ಯಗಳು ಕುಸಿಯುತ್ತಿವೆ. ಧಾವಂತದ ದಿನಗಳಲ್ಲಿ ಸಂಪ್ರದಾಯ, ಸಂಸ್ಕೃತಿಗಳು ಹೊಸ ರೂಪ ಪಡೆಯುತ್ತಿರುವುದು ಆತಂಕದ ಸಂಗತಿ’ ಎಂದು ಮಾಜಿ ಸಂಸದ, ಪ್ರೊ. ಐ.ಜಿ. ಸನದಿ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ನಡೆದ ದಿ. ವೀರಪ್ಪ ಮಡಿವಾಳಪ್ಪ ವಳಸಂಗ ಮತ್ತು ದಿ. ರುದ್ರಮ್ಮ ವಳಸಂಗ ದತ್ತಿ, ದಿ. ಸಾವಕ್ಕ ಹುಬ್ಳಿಕರ ದತ್ತಿ, ದಿ. ಗುರುದೇವಿ ಮತ್ತು ದಿ. ವೀರಯ್ಯ ಚಿಕ್ಕಮಠ ದತ್ತಿ ಉಪನ್ಯಾಸ ಕಾರ್ಯಕ್ರಮ ಮತ್ತು ಸುಮಧುರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‌

‌‘ನಮ್ಮದು ಶ್ರೀಮಂತ ಸಂಸ್ಕೃತಿಯಾಗಿದ್ದು, ಜತನದಿಂದ ಕಾಪಾಡಿಕೊಂಡು ಮುಂದಿನ ಪಿಳಿಗೆಗೂ ಕೊಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.

ADVERTISEMENT

ಡಾ.‌ ರಮೇಶ ಮಹಾದೇವಪ್ಟ ಮಾತನಾಡಿ, ‘ಸಾರ್ವಜನಿಕರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದತ್ತಿ ಇಡುವುದರ ಮೂಲಕ, ಕಲೆಗಳನ್ನು ಪ್ರೋತ್ಸಾಹಿಸಬೇಕು’ ಎಂದರು.

ಕಲಾವಿದ ಸುನೀಲ್ ಪತ್ರಿ ಅವರ ಮಾರ್ಗದರ್ಶನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.‌ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಂಭಯ್ಯ ಹಿರೇಮಠ, ವೈಷ್ಣವಿ ಹಾನಗಲ್, ಪೂರ್ಣಿಮಾ ಮುತ್ನಾಳ, ಪದ್ಮಾಕ್ಷಿ ಒಡಯರ, ಶಾಂತಾ ಲಕ್ಷ್ಮೇಶ್ವರ, ಭೀಮರಾಶಿ ಹೂಗಾರ, ಪ್ರಮೀಳಾ ಜಕ್ಕನ್ನವರ, ಮಂಜುನಾಥ ಯಲಿವಾಳ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.‌ ಸಂಧ್ಯಾ ದೀಕ್ಷಿತ, ವಿದ್ಯಾ ವಂಟಮುರಿ, ಪ್ರೊ. ಕೆ.ಎಸ್. ಕೌಜಲಗಿ, ಪ್ರೊ. ಜಿ.ವಿ. ಚಿಕ್ಕಮಠ, ವೀರಣ್ಣ ಹುಬ್ಳಿಕರ, ಪ್ರೊ. ಜಿ.ವಿ. ವಳಸಂಗ, ಬಿ.ಎ. ಪಾಟೀಲ್, ಆರ್.ಟಿ. ತವನಪ್ಟನವರ, ಜಯಪ್ರಕಾಶ್ ಟೆಂಗಿನಕಾಯಿ, ಎಸ್‌.ಕೆ. ಆದಪ್ಪನವರ, ಶಶಿಧರ ಸಾಲಿ, ಮಹೇಶ ದ್ಯಾವಪ್ಪನರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.